ಬೆಂಗಳೂರು, ಮಾರ್ಚ್ 4, 2026 : RCB ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್ ಆಡೋದು ಫಿಕ್ಸ್ ಆಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ 5 ಪಂದ್ಯಗಳನ್ನು ಆಡಲಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 5 ಲೀಗ್ ಪಂದ್ಯಗಳು ನಡೆಯಲಿವೆ. IPL ಉದ್ಘಾಟನಾ ಪಂದ್ಯವೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ.
ಪ್ಲೇ ಆಫ್ ಪಂದ್ಯ ಕೂಡ ಚಿನ್ನಸ್ವಾಮಿಯಲ್ಲೇ ನಡೆಯಲಿದೆ. IPL ಫೈನಲ್ ಸಹ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ ಎಂಬ ಮಾಹಿತಿ ಬಲ್ಲ ಮುಲಗಳಿಂದ ಲಭ್ಯವಾಗಿದೆ.
ಕಳೆದ ಐಪಿಎಲ್ ಕಪ್ ವಿಜಯೋತ್ಸವದ ಕಾಲ್ತುಳಿತದ ಘಟನೆಯ ಬಳಿಕ ಈ ವರ್ಷ ಆರ್‌ಸಿಬಿ ಟೀಮ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ಆಡುತ್ತೋ ಇಲ್ಲವೋ ಎಂಬ ಗೊಂದಲ, ಕುತೂಹಲವೂ ಇತ್ತು. ಅದಕ್ಕೆ ಈಗ ತೆರೆ ಬಿದ್ದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ 5 ಮ್ಯಾಚ್ ಆಡೋದು ಖಚಿತವಾಗಿದೆ. ಪ್ಲೆ ಆಫ್ ನ ಯಾವ ಯಾವ ಪಂದ್ಯಗಳು ಬೆಂಗಳೂರಲ್ಲಿ ನಡೆಯಲಿದೆ ಎಂಬುದು ನಿಜಕ್ಕೂ ಕೌತುಕ ಮೂಡಿಸಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.
ಬೆಂಗಳೂರು ತಂಡದ ಉದ್ಘಾಟನಾ ಪಂದ್ಯ ಕೂಡ ಇಲ್ಲೇ ನಡೆಯಲಿದ್ದು, ತವರು ನೆಲದಲ್ಲಿ ಪಂದ್ಯಗಳು ನಡೆಯುತ್ತಿರುವುದು ತಂಡಕ್ಕೆ ಹೆಚ್ಚಿನ ಬಲ ಸಿಗಲಿದೆ. ಆರ್‌ಸಿಬಿ ಫ್ರಾಂಚೈಸಿಯು ಈ ಕುರಿತು ಕೆಎಸ್‌ಸಿಎ ಜೊತೆ ಮಾತುಕತೆ ನಡೆಸಿ ಅಧಿಕೃತ ಒಪ್ಪಿಗೆ ನೀಡಿದೆ.
