ಮೈಸೂರು, ಡಿಸೆಂಬರ್ 26, 2025 :ನನ್ನ ಪತ್ನಿ, ತಂಗಿ ಹಾಗೂ ಮಗಳು ನಿನ್ನೆ ಅರಮನೆ ಬಳಿಗೆ ಬಂದಿದ್ದರು. ಈ ವೇಳೆ ಸ್ಪೋಟ ಸಂಭವಿಸಿದ್ದು ಪತ್ನಿಯ ಕಂಡೀಶನ್ ಕ್ರಿಟಿಕಲ್ ಇದೆ. ಹಾಗೂ ತಂಗಿಯ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಮೈಸೂರಿನ ಅರಮನೆ ಸನಿಹದಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮಿಯವರ ಪತಿ ರಾಜೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಾನು ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದೆವು. ದೇವಸ್ಥಾನಕ್ಕೆ ಹೋಗಿ ನಂತರ ಅರಮನೆ ಬಳಿ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಸ್ಫೋಟ ಸಂಭವಿಸಿ ನನ್ನ ಪತ್ನಿಗೆ ಗಂಭೀರ ಗಾಯವಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತಂಗಿಗೆ ಕತ್ತಿನ ಭಾಗದಲ್ಲಿ ಗಂಭೀರ ಗಾಯವಾಗಿದೆ ಆಕೆ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳಿಗೂ ಕತ್ತಿನ ಭಾಗದಲ್ಲಿ ಗಾಯವಾಗಿದೆ.ಪತ್ನಿಯ ಕಂಡೀಶನ್ ಕ್ರಿಟಿಕಲ್ ಇದೆ. ತಂಗಿಯ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಗಾಯಾಳು ಲಕ್ಷ್ಮಿಯವರ ಪತಿ ರಾಜೇಶ್ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಹಾಗೂ ಗಾಯಾಳು ಲಕ್ಷ್ಮಿ ಮಗಳು ಮಾಧಯಮಗಳೊಂದಿಗೆ ಮಾತನಾಡಿ , ನೆನ್ನೆ ಅಮ್ಮನ ಜೊತೆ ಅರಮನೆ ಮುಂದೆ ನಡೆದುಕೊಂಡು ಹೋಗುತ್ತಿದ್ದೆ. ಅಮ್ಮ ನನ್ನ ಮುಂದೆ ನಡೆದುಕೊಂಡು ಹೋಗುತ್ತಿದ್ದರು ನಾನು ಅವರ ಹಿಂದೆ ಇದ್ದೆ. ಆ ವೇಳೆ ಬ್ಲಾಸ್ಟ್ ಆಯ್ತು, ಬ್ಲಾಸ್ಟ್ ಆದ ನಂತರ ಏನಾಯ್ತು ಅಂತ ಗೊತ್ತಾಗಲಿಲ್ಲ. ನಂತರ ಅಮ್ಮನನ್ನು ಹುಡುಕುತ್ತಿದ್ದೆ ಆದರೆ ಅಮ್ಮ ಕಾಣಿಸಲಿಲ್ಲ. ನಂತರ ಪೊಲೀಸರು ಅಮ್ಮನನ್ನು ಕರೆದುಕೊಂಡು ಆಸ್ಪತ್ರೆಗೆ ಹೋದರು ಅಷ್ಟೇ. ಹೊಗೆ ಬಾಯಿಗೆ ತುಂಬಿಕೊಂಡಿತ್ತು ಮಾತನಾಡಲು ಕೂಡ ಆಗುತ್ತಿರಲಿಲ್ಲ. ಅದಾದ ನಂತರ ನಾನಿನ್ನು ಅಮ್ಮನನ್ನು ನೋಡಿಲ್ಲ ಎಂದು ಗಾಯಾಳು ಲಕ್ಷ್ಮಿಯವರ ಮಗಳು ಅಳಲು ತೋಡಿಕೊಂಡಿದ್ದಾರೆ.
