ಮೈಸೂರು, ನವೆಂಬರ್ 24, 2025 : ರಾಮಸ್ವಾಮಿ ವೃತ್ತದಲ್ಲಿ ಅಳವಡಿಸಿರುವ ವಾಣಿಜ್ಯ ಜಾಹೀರಾತು ಕಮಾನು ಇದೀಗ ಪಾದಚಾರಿಗಳು ಮತ್ತು ವಾಹನ ಸವಾರರ ಜೀವಕ್ಕೆ ಅಪಾಯ ಉಂಟುಮಾಡುವ ಸ್ಥಿತಿಗೆ ಬಂದಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕಮಾನನ್ನು ಈ ಹಿಂದೆಯೇ ಅಳವಡಿಸಲ್ಪಟ್ಟಿದ್ದು, ಈಗಾಗಲೇ ಹಾಳಾಗಿರುವ ಸ್ಥಿತಿಗೆ ತಲುಪಿದ್ದು ಕಳಚಿ ಬೀಳುವ ಸಾಧ್ಯತೆ ಹೆಚ್ಚಾಗಿದೆ ಎಂದು ನಾಗರಿಕರು ಹೇಳಿದ್ದಾರೆ. “ಯಾವಾಗ ಇದು ಯಾರ ತಲೆಯ ಮೇಲೋ ವಾಹನದ ಮೇಲೋ ಬಿದ್ದು ಅಪಾಯ ಸೃಷ್ಟಿಸುತ್ತದೋ ಅನ್ನೋ ಆತಂಕ ಎಲ್ಲರಲ್ಲೂ ಇದೆ” ಎಂದು ಸ್ಥಳೀಯರು ಹೇಳಿದ್ದಾರೆ.ಸಂಬಂಧಿಸಿದ ಇಲಾಖೆ ಮತ್ತು ಮೈಸೂರು ಮಹಾನಗರ ಪಾಲಿಕೆ ಈ ಬಗ್ಗೆ ಯಾವ ಕ್ರಮವೂ ಕೈಗೊಳ್ಳದಿರುವುದು ನಾಗರಿಕರಲ್ಲಿ ಹೆಚ್ಚಿನ ಕಳವಳವನ್ನು ಉಂಟುಮಾಡಿದೆ.ಸ್ಥಳಕ್ಕೆ ಭೇಟಿ ನೀಡಿದ ಹೋರಾಟಗಾರರು ಮತ್ತು ನಾಗರಿಕರು ಇದು ಸ್ಪಷ್ಟ ನಿರ್ಲಕ್ಷ್ಯ ಯಾರಿಗಾದರೂ ಗಾಯವಾದರೆ? ಪ್ರಾಣಾಪಾಯವಾದರೆ? ಅದಕ್ಕೆ ಯಾರು ಜವಾಬ್ದಾರರು?ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕಮಾನು ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ತಪ್ಪಿದ್ದಲ್ಲಿ ಮೈಸೂರು ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಹಿತರಕ್ಷಣಾ ವೇದಿಕೆಯ ನಾಯಕರು ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
