PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ರಾಕೇಶ್ ಸಿದ್ದರಾಮಯ್ಯ ಬದುಕಿದ್ದರೆ ಸಿದ್ದರಾಮಯ್ಯಗೆ ತಗ್ಗಿಸುವ ಸ್ಥಿತಿ ತರುತ್ತಿರಲಿಲ್ಲ; ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಪ್ರತಾಪ್‌ ಸಿಂಹ ಕಿಡಿ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ರಾಕೇಶ್ ಸಿದ್ದರಾಮಯ್ಯ ಬದುಕಿದ್ದರೆ ಸಿದ್ದರಾಮಯ್ಯಗೆ ತಗ್ಗಿಸುವ ಸ್ಥಿತಿ ತರುತ್ತಿರಲಿಲ್ಲ; ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಪ್ರತಾಪ್‌ ಸಿಂಹ ಕಿಡಿ
ಮುಖಪುಟಮೈಸೂರು ನಗರರಾಜಕೀಯ

ರಾಕೇಶ್ ಸಿದ್ದರಾಮಯ್ಯ ಬದುಕಿದ್ದರೆ ಸಿದ್ದರಾಮಯ್ಯಗೆ ತಗ್ಗಿಸುವ ಸ್ಥಿತಿ ತರುತ್ತಿರಲಿಲ್ಲ; ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಪ್ರತಾಪ್‌ ಸಿಂಹ ಕಿಡಿ

Prathinidhi News
Last updated: February 10, 2026 11:23 am
Prathinidhi News
Published February 10, 2026
Share
SHARE

ಮೈಸೂರು , ಫೆಬ್ರವರಿ 10, 2026: ರಾಕೇಶ್ ಸಿದ್ದರಾಮಯ್ಯರಿಂದ ಸಿದ್ದರಾಮಯ್ಯಗೆ ಯಾವತ್ತೂ ಮುಜುಗರ ಆಗಿರಲಿಲ್ಲ. ರಾಕೇಶ್ ಸಿದ್ದರಾಮಯ್ಯ ಬದುಕಿದ್ದರೆ ಸಿದ್ದರಾಮಯ್ಯಗೆ ತಗ್ಗಿಸುವ ಸ್ಥಿತಿ ತರುತ್ತಿರಲಿಲ್ಲ. ಆದರೆ ಸಿದ್ದರಾಮಯ್ಯಗೆ ಯತೀಂದ್ರ ಕೆಟ್ಟ ಹೆಸರು ತರುತ್ತಿದ್ದಾರೆ. ಡಾ. ಯತೀಂದ್ರ ವರ್ಗಾವಣೆ ದಂಧೆಯಲ್ಲಿ ತೊಡಗುವ ಮೂಲಕ ಯತೀಂದ್ರ ಅನಧಿಕೃತವಾಗಿ ವರ್ಗಾವಣೆ ಸಚಿವರಾಗಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. 

ರಾಜ್ಯ ಸರ್ಕಾರದ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರನ ಹಸ್ತಕ್ಷೇಪ ಆರೋಪ ವಿಚಾರವಾಗಿ ಮೈಸೂರಿನಲ್ಲಿ ಹೇಳಿಕೆ ನೀಡಿದ ಮಾಜಿ ಸಂಸದ ಪ್ರತಾಪ್‌ ಸಿಂಹ, ಸಿದ್ದರಾಮಯ್ಯ ತಲೆ ತಗ್ಗಿಸುವ ಕೆಲಸವನ್ನು ಯತೀಂದ್ರ ಮಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯನವರ ಮೊದಲ ಪುತ್ರ ರಾಕೇಶ್‌ ನಿಂದ ಸಿದ್ದರಾಮಯ್ಯಗೆ ಯಾವತ್ತೂ ಮುಜುಗರ ಆಗಿರಲಿಲ್ಲ. ಅಪ್ಪನ ಅಧಿಕಾರವನ್ನು ಯತೀಂದ್ರ ಅತಿ ಹೆಚ್ಚು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಸಿದ್ದರಾಮಯ್ಯ ಹೆಜ್ಜೆ ಹೆಜ್ಜೆಗೂ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯವಾಗಿದೆ. ಯತೀಂದ್ರ ಅವರೇ ಯಾರಿಗಾಗಿ ಇಷ್ಟು ಆಸ್ತಿ ಮಾಡುತ್ತಿದ್ದೀರಿ? ಮನೆ, ತೋಟ, ಆಸ್ತಿ, ಎಲ್ಲಾ ಇದೆ.ನಿಮ್ಮ ಅಣ್ಣನ ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ಇನ್ನೂ ಯಾರಿಗಾಗಿ ಇಷ್ಟು ಆಸ್ತಿ ಮಾಡುತ್ತಿದ್ದೀರಿ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಎಲ್ಲರಿಗೂ ಗದರಿಸುವ ಸಿದ್ದರಾಮಯ್ಯ ತಮ್ಮ ಮಗನಿಗೆ ಈ ವಿಚಾರದಲ್ಲಿ ಗದರಿಸಲು ಆಗುತ್ತಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ವರ್ಷದಲ್ಲಿ ಮೂರು ದಿನ ಮಾತ್ರ ಕಾಣುತ್ತಾರೆ. ಸ್ವಾತಂತ್ರ್ಯ ದಿನೋತ್ಸವ, ಗಣರಾಜ್ಯೋತ್ಸವ ಹಾಗೂ ದಸರಾದಲ್ಲಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು ಕಾಣುತ್ತಾರೆ. ಇಡೀ ಮೈಸೂರು ಅಭಿವೃದ್ಧಿ ಸತ್ತು ಹೋಗಿದೆ. ವರ್ಗಾವಣೆ ದಂಧೆ ಮೈಸೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸಾಗಿದೆ. ಯತೀಂದ್ರ ಬಾಯಲ್ಲಿ ಒಂದು ದಿನವಾದರೂ ಮೈಸೂರು ಅಭಿವೃದ್ಧಿ ಮಾತು ಬಂದಿದ್ಯಾ? ನಾಳೆ ಬೆಳಿಗ್ಗೆ ಬಿಬಿಎಂಪಿ, ಮೈಸೂರು ಪಾಲಿಕೆ ಚುನಾವಣೆ ನಡೆದರೆ ಕಾಂಗ್ರೆಸ್ ಧೂಳೀಪಟ ಆಗುತ್ತದೆ.

ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ಕಾಂಗ್ರೆಸ್ ಗೆ ಧೈರ್ಯ ಇಲ್ಲ ಎಂದು ಕಿಡಿಕಾರಿದ ಅವರು, ಅಧಿಕಾರ ಹಸ್ತಾಂತರ ಇಲ್ಲ ಎಂಬ ಯತೀಂದ್ರ ಹೇಳಿಕೆ ಅವರ ತಂದೆಯ ಮನದ ಮಾತು. ಸಿದ್ದರಾಮಯ್ಯ ಹೇಳಲು ಆಗದ್ದನ್ನು ಮಗನ‌ ಮೂಲಕ ಹೇಳಿಸುತ್ತಿದ್ದಾರೆ. ವೀರೇಂದ್ರ ಪಾಟೀಲ್ ನಂತರ ಕಾಂಗ್ರೆಸ್ ಗೆ ರಾಜ್ಯದಲ್ಲಿ ಯಾವ ಸ್ಥಿತಿ ಬಂತೋ ಅದೇ ಸ್ಥಿತಿ ಈಗಲು ಕಾಂಗ್ರೆಸ್ ಗೆ ಬರುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿಕೆ ನೀಡಿದರು.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ನವದೆಹಲಿಬೆಂಗಳೂರುಮುಖಪುಟ

T20 World Cup 2026: ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸೂಪರ್ 8ಕ್ಕೆ ಭಾರತ ಲಗ್ಗೆ

February 16, 2026
ಮುಖಪುಟಮೈಸೂರು ನಗರ

ಯತೀಂದ್ರ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ: ಫ್ಲೆಕ್ಸ್ ಹಾವಳಿ ಹಾಗೂ ಬಾಗಲಕೋಟೆ ಕಲ್ಲು ತೂರಾಟದ ವಿರುದ್ಧ ಮೈಸೂರಿನಲ್ಲಿ ಆಕ್ರೋಶ

February 21, 2026
ಬೆಂಗಳೂರುಮುಖಪುಟ

ಬೆಂಗಳೂರಿನಲ್ಲಿ ಶುರುವಾಯ್ತು ಮೈಸೂರು ಫೇಮಸ್ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿ, ದೋಸೆ ಸವಿದು ಮೆಚ್ಚಿದ ಸಿಎಂ ಸಿದ್ದರಾಮಯ್ಯ

January 23, 2026
ಕ್ರೀಡೆಮುಖಪುಟಮೈಸೂರು ನಗರ

ಮೈಸೂರು ಪೋರನ ಮಹೋನ್ನತ ಸಾಧನೆ..! ದೇಸಿ ಪ್ರತಿಭೆ ಈಗ OMAN ಟೀಮ್ ಪ್ಲೇಯರ್..!

November 18, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?