ಹೆಚ್.ಡಿ.ಕೋಟೆ, ಜನವರಿ 23, 2026 :ಹೆಚ್ ಡಿ ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿಂದು ತಾಲ್ಲೂಕಿನ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ,ಆರೋಗ್ಯ ಸುರಕ್ಷತಾಧಿಕಾರಿಗಳಿಗೆ , ಸಮುದಾಯ ಆರೋಗ್ಯ ಅಧಿಕಾರಿಗಳಿಗೆ HPV ಲಸಿಕೆ ನೀಡುವ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ರವರು ಅಧ್ಯಕ್ಷತೆಯನ್ನು ವಹಿಸಿ ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ”ರವಿಕುಮಾರ್ ,ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ”ಭಾಗ್ಯ ಲಕ್ಷ್ಮಿ,ಮಕ್ಕಳ ತಜ್ಞರಾದ ಡಾ”ಜಯಮಾಲ ರವರು ಉಪಸ್ಥಿತರಿದ್ದರು.
ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ”ರವಿಕುಮಾರ್ ಮಾತನಾಡಿ HPV ಎಂದರೆ ಹ್ಯೂಮನ್ ಪ್ಯಾಪಿಲೋಮವೈರಸ್. ಈ ಲಸಿಕೆ ಯು ಸರ್ವಿಕಲ್ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ ಈ ಲಸಿಕೆಯನ್ನು 9-14 ವರ್ಷದ ಹೆಣ್ಣು ಮಕ್ಕಳಿಗೆ ಹಾಕಲಾಗುವುದು, ಈಗ ಮೊದಲ ಆದ್ಯತೆಗೆ 14 ವರ್ಷ ತುಂಬಿ 15 ವರ್ಷದೊಳಗಿರುವ ಮಕ್ಕಳಿಗೆ ಹಾಕಲಾಗುವುದು. ನಮ್ಮ ಹೆಚ್.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕಿನಲ್ಲಿ 9-14 ವರ್ಷದ ಹೆಣ್ಣು ಮಕ್ಕಳು ಒಟ್ಟು 45,492 ಇದ್ದು ಈಗ ನಮಗೆ ಮೊದಲು ಬಾರಿಗೆ 14 ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಹಾಕುವುದರಿಂದ ಒಟ್ಟು 9,097 ಮಕ್ಕಳ ಸಂಖ್ಯೆ ಇದ್ದು ಈ ಕಾರ್ಯಕ್ರಮ ಫೆಬ್ರವರಿ ತಿಂಗಳಲ್ಲಿ ಲಸಿಕೆ ನೀಡಲು ಪ್ರಾರಂಭ ಮಾಡುತ್ತೇವೆ ಹಾಗೂ ಈ ಲಸಿಕೆಯನ್ನು ಆಸ್ಪತ್ರೆಯಲ್ಲಿ ಮಾತ್ರ ನೀಡಲಾಗುವುದು ಶಾಲೆ ಅಥವಾ ಉಪಕೇಂದ್ರದಲ್ಲಿ ನೀಡಲಾಗುವುದಿಲ್ಲ ಎಂದು ಮಾಹಿತಿ ನೀಡಿದರು.
ನಂತರ ತಹಶೀಲ್ದಾರ್ ಶ್ರೀನಿವಾಸ ರವರು ಮಾತನಾಡಿ ತಾಲ್ಲೂಕು ಆರೋಗ್ಯಾಧಿಕಾರಿಗಳು ನಮ್ಮ ತಾಲ್ಲೂಕಿನಲ್ಲಿ ಅನೇಕ ಕಾರ್ಯ ಕ್ರಮವನ್ನು ನಡೆಸುತ್ತ ಬರುತ್ತಿದ್ದಾರೆ. ಇದರ ಜೊತೆಗೆ ಕ್ಷೇತ್ರ ಸಿಬ್ಬಂದಿ ವರ್ಗದವರಿಗೆ ಈ ರೀತಿ ತರಬೇತಿ ನೀಡುತ್ತಿರುವುದು ತುಂಬಾ ಉಪಯುಕ್ತವಾದ ಕಾರ್ಯಕ್ರಮ ಹಾಗೂ ಸಂತೋಷ ಕರವಾದ ವಿಷಯ. ಎಲ್ಲ ಕ್ಷೇತ್ರ ಸಿಬ್ಬಂದಿ ವರ್ಗದವರು ತರಬೇತಿಯನ್ನು ಪಡೆದು ಮುಂದಿನ ದಿನಗಳಲ್ಲಿ ನಿಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಯನ್ನು ನೀಡಿ ಕ್ಯಾನ್ಸರ್ ತಡೆಗಟ್ಟಿ ಎಂದು ತಿಳಿಸಿದರು.
ಕಾರ್ಯ ಗಾರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ,ತಾಲ್ಲೂಕಿನ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ,ಆರೋಗ್ಯ ಸುರಕ್ಷತಾಧಿಕಾರಿಗಳಿಗೆ ,ಸಮುದಾಯ ಆರೋಗ್ಯ ಅಧಿಕಾರಿಗಳು ಹಾಜರಿದ್ದರು.
