ಮೈಸೂರು ,ನವೆಂಬರ್ 15 , 2025 : ಇತ್ತೀಚೆಗೆ ದೆಹಲಿಯಲ್ಲಿ ಸಂಭವಿಸಿದ ಕಾರು ಬಾಂಬ್ ಸ್ಪೋಟ ಘಟನೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ವಸಂತ್ ಕುಮಾರ್ ನೇತೃತ್ವ ವಹಿಸಿದ್ದರು.ಇಸ್ಲಾಮಿಕ್ ಭಯೋತ್ಪಾದನೆ ಖಂಡಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶಪಟ್ಟರು . ಘಟನೆಯಿಂದ ಬುರ್ಖಾ ಧರಿಸಿರುವ ಮಹಿಳೆಯರ ಮೇಲೆ ಅನುಮಾನ ಪಡುವಂತಾಗಿದೆ ಎಂದ ಪ್ರತಿಭಟನಾಕರರು, ಹಿಂದೂಗಳು ಒಂದಾಗಿ ಮೂಲಭುತವಾದಿಗಳ ವಿರುದ್ಧ ಹೋರಾಡುವಂತೆ ಕರೆ ನೀಡಿದರು.
ಮೈಸೂರು : ದಿಲ್ಲಿಯ ಕಾರು ಬ್ಲ್ಯಾಸ್ಟ್ ಗೆ ಖಂಡನೆ.. ಉಗ್ರರ ಸದೆ ಬಡಿಯುವಂತೆ ಹಿಂದೂ ಜಾಗರಣ ವೇದಿಕೆ ಪ್ರೊಟೆಸ್ಟ್..
Leave a Comment
