ಮಡಿಕೇರಿ: ತೆಲಂಗಾಣದಲ್ಲಿ ಫುಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ನಡೆದ ರಾಷ್ಟ್ರ ಮಟ್ಟದ ಪೊಲೀಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಜಿತೇಂದ್ರ ರೈ ಚಿನ್ನದ ಪದಕ ಪಡೆದಿದ್ದಾರೆ.
ಸೇನಾಪಡೆ, ಭಾರತೀಯ ರೈಲ್ವೆ ಅರೆಸೇನಾ ಪಡೆ, ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 28 ರಾಜ್ಯ ಹಾಗೂ ವಿವಿಧ ಘಟಕಗಳು ಈ ಕ್ರೀಡೆಯಲ್ಲಿ ಭಾಗವಹಿಸಿದ್ದು, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಜಿತೇಂದ್ರ ರೈ ಡಬಲ್ಸ್ನಲ್ಲಿ ಕಂಚಿನ ಪದಕ ಹಾಗೂ ಮಿಕ್ಸ್ ಡಬಲ್ಸ್ ನಲ್ಲಿ ಚಿನ್ನದ ಪದಕ ಪಡೆದರು. ಇವರು ಜಿಲ್ಲಾ ಶಸಸ್ತ್ರ ದಳದಲ್ಲಿ ಎಆರ್ಎಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಫೋಟೋ 24 ಎಂಡಿಕೆ 15 ; ಜಿತೇಂದ್ರ ರೈ