ಕೇರಳ, ಡಿಸೆಂಬರ್ 8, 2025 : ಮಾಲಿವುಡ್ ಖ್ಯಾತ ನಟ ದಿಲೀಪ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಟಿ ಮೇಲಿನ ಅತ್ಯಾಚಾರ ಹಾಗೂ ಹಲ್ಲೆ ಕೇಸ್ ನಲ್ಲಿ ಖುಲಾಸೆ ಆಗಿದೆ.2017 ರಲ್ಲಿ ದಾಖಲಾಗಿದ್ದ ಕೇಸ್ ನಲ್ಲಿ ಕೇರಳ ನ್ಯಾಯಾಲಯ ದೋಷಮುಕ್ತ ಎಂದು ಘೋಷಿಸಿದೆ.

ಐಪಿಸಿ ಸೆಕ್ಷನ್ ನ ಹಲವು ಸಂಹಿತೆಯಡಿಯಲ್ಲಿ ಕ್ರಿಮಿನಲ್ ಪಿತೂರಿ, ಅಕ್ರಮ ಬಂಧನ, ದೌರ್ಜನ್ಯಕ್ಕೆ ಒಳಗಾದ ಹಲ್ಲೆ, ಅಪಹರಣ, ವಿವಸ್ತ್ರಗೊಳ್ಳಲು ಯತ್ನಿಸುವುದು ಮತ್ತು ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಹೊರಿಸಲಾಗಿತ್ತು. ಎರ್ನಾಕುಲಂ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ ವರ್ಗೀಸ್ ಇವತ್ತು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಸದ್ಯ ಕೇರಳದ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಸಂತ್ರಸ್ತ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ದೀಲೀಪ್‌ರ ವಿರುದ್ಧ ಸಾಕ್ಷ್ಯಗಳನ್ನು ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂದನ್ ಬಿ, ವಿಜೇಶ್ ವಿಪಿ, ಸಲೀಂ ಎಚ್, ಪ್ರದೀಪ್, ಚಾರ್ಲಿ ಥಾಮಸ್, ಸನಿಲ್ ಕುಮಾರ್ ಅಲಿಯಾಸ್ ಮೇಸ್ಟ್ರಿ ಸನಿಲ್ ಮತ್ತು ಶರತ್ ಸೇರಿದಂತೆ ಹತ್ತು ಆರೋಪಿಗಳು ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಿದ್ದರು.
