ಬೆಂಗಳೂರು , ಜನವರಿ 23, 2025 : ಕರ್ನಾಟಕ ಸದ್ಯ ಚಳಿಗಾಲದ ಕೊನೆ ಹಂತದಲ್ಲಿದೆ. ಈ ನಡುವೆ ಚಳಿ ಮತ್ತಷ್ಟು ಭೀತಿ ಹುಟ್ಟಿಸುವ ಸಾಧ್ಯತೆ ಇದೆ . ಮುಂದಿನ 5 ದಿನ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗೆ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ದಕ್ಷಿಣ ಕರ್ನಾಟಕಕ್ಕಿಂತಲೂ ಉ. ಕರ್ನಾಟಕದಲ್ಲಿ ಚಳಿಯ ತೀವ್ರತೆ ಹೆಚ್ಚಿದೆ. ಇನ್ನೂ ನಾಲೈದು ದಿನ ಜೋರು ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಬೆಳಗ್ಗೆ ಮಂಜಿನ ವಾತಾವರಣವಿದ್ದು, ಚಳಿ ಜತೆ ಶೀತ ಗಾಳಿ ಸಹ ಬೀಸುತ್ತಿರುವುದರಿಂದ ವಾತಾವರಣ ಮತ್ತಷ್ಟು ಹದಗೆಡಲಿದೆ ಎನ್ನಲಾಗಿದೆ. ಬೀದರ್, ಯಾದಗಿರಿ, ಧಾರವಾಡ, ವಿಜಯಪುರ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಹೆಚ್ಚಿರುವುದರಿಂದ ಜನರು ಜಾಗ್ರತೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಹೇಳಿದೆ.