ಮೈಸೂರು, ಜನವರಿ 21, 2026: ಸಿದ್ದಗಂಗಾ ಮಠದ ಲಿಂಗೈಕ್ಯ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ಮೈಸೂರಿನ ವಿಶ್ವ ಮಾನವ ಜೋಡಿ ರಸ್ತೆಯಲ್ಲಿರುವ ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಭಕ್ತವೃಂದದ ವತಿಯಿಂದ ವಿಶೇಷ ಭಕ್ತಿ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಶತಮಾನ ಕಂಡ ಮಹಾನ್ ಕಾಯಕಯೋಗಿಯ ಸ್ಮರಣಾರ್ಥವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಕ್ತರು ಶ್ರದ್ಧಾಭಕ್ತಿಗಳಿಂದ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಭಕ್ತವೃಂದದ ಪ್ರಮುಖರಾದ ದೀಪು ಕೆ.ಆರ್, ರಜನೀಶ್, ತ್ರಿಶೂಲ್ ಹಾಗೂ ಮಾಜಿ ನಗರ ಪಾಲಿಕಾ ಸದಸ್ಯ ಜಗದೀಶ್ ಉಪಸ್ಥಿತರಿದ್ದರು. ಉಳಿದಂತೆ ಗಿರೀಶ್, ರಾಜು, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಎಸ್.ಎನ್. ರಾಜೇಶ್, ದೂರ ರಾಜಣ್ಣ, ಸತ್ಯನಂದ ವಿಟ್ಟು, ರಾಕೇಶ್, ಬಸವರಾಜ್, ಅಭಿಲಾಶ್ ಸೇರಿದಂತೆ ಹಲವು ಗಣ್ಯರು ಮತ್ತು ಭಕ್ತಾದಿಗಳು ಪಾಲ್ಗೊಂಡು ಸ್ವಾಮೀಜಿಯವರ ಸೇವೆಯನ್ನು ಸ್ಮರಿಸಿದರು.
