ಮೈಸೂರು, ಏಪ್ರಿಲ್ 13, 2026 : ನಗರದ ಚಾಮುಂಡಿಪುರಂ ವೃತ್ತದಲ್ಲಿ ಖ್ಯಾತ ಹಿನ್ನಲೆ ಗಾಯಕಿ ಆಶಾ ಬೋಸ್ಲೆ ಅವರ ನಿಧನದ ಹಿನ್ನೆಲೆಯಲ್ಲಿ ಕಲಾ ಉತ್ಸವ ಟ್ರಸ್ಟ್ ವತಿಯಿಂದ ಅವರ ಭಾವಚಿತ್ರ ಹಿಡಿದು ಸಂತಾಪ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಭಾಭಾರತೀಯ ಸಂಗೀತ ಕ್ಷೇತ್ರದ ಅನನ್ಯ ಕಂಠಧ್ವನಿಯೊಂದು ಮೌನವಾಗಿದ್ದು, ದೇಶದ ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದರು.
ಅನೇಕ ದಶಕಗಳ ಕಾಲ ತಮ್ಮ ಸುಮಧುರ ಗಾಯನದಿಂದ ಭಾರತೀಯ ಚಿತ್ರರಂಗ ಹಾಗೂ ಸಂಗೀತಾಭಿಮಾನಿಗಳ ಮನಗೆದ್ದ ಆಶಾ ಬೋಸ್ಲೆ ಅವರು ಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದು, ಅವರ ಸಾಧನೆ ಭಾರತೀಯ ಸಂಗೀತ ಇತಿಹಾಸದಲ್ಲಿ ಸದಾ ಅಜರಾಮರವಾಗಿರಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಲಾ ಉತ್ಸವ ಟ್ರಸ್ಟ್ ಅಧ್ಯಕ್ಷ ಅಮಿತ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜಿ ರಾಘವೇಂದ್ರ,ಚಕ್ರಪಾಣಿ, ಎಸ್ ಎನ್ ರಾಜೇಶ್, ರಾಕೇಶ್, ಸುಚೇಂದ್ರ,ಮದನ್, ನವೀನ್ ಕೆಂಪಿ, ರವಿಚಂದ್ರ, ಸುರೇಶ್, ಪ್ರಸಾದ್, ದೂರ ರಾಜಣ್ಣ, ಮಹದೇವಸ್ವಾಮಿ ಹಾಗೂ ಇನ್ನಿತರರು ಹಾಜರಿದ್ದರು
