ಅಜ್ಜಮಾಡ ರಮೇಶ್ ಕುಟ್ಟಪ್ಪ ನಾಪೋಕ್ಲು
ಗಗನ್ ತಿಮ್ಮಯ್ಯ, ಪ್ರಣವ್ ತಿಮ್ಯಯ್ಯ, ಗಗನ್ ಬೆಳ್ಯಪ್ಪ (೨), ಚೇತನ್, ನರೇನ್ ಗಳಿಸಿದ ಗೋಲಿನಿಂದ ಚೆಪ್ಪುಡಿರ ತಂಡ ೬-೦ ಗೋಲಿನಿಂದ ಬಾಳೆಯಡ ತಂಡವನ್ನು ಪರಾಭವಗೊಳಿಸಿತು.
ಭರ್ಜರಿ ಗೆಲುವಿನೊಂದಿಗೆ ಚೆಪ್ಪುಡಿರ ತಂಡ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ಕೊಡವ ಕುಟುಂಬ ತಂಡಗಳ ನಡುವಿನ ೨೪ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ನಡೆಯುತ್ತಿದೆ.
ಟೈಬ್ರೇಕರ್ನಲ್ಲಿ ೨-೦ ಗೋಲಿನಿಂದ ಚೆಕ್ಕೇರ ತಂಡ ಚೇನಂಡ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ಗೋಲು ಗಳಿಸಲಿಲ್ಲ. ಮುತ್ತಣ್ಣ, ಪ್ರೇಕ್ಷಿತ್ ಮುದ್ದಯ್ಯ ಬಾರಿಸಿದ ಗೋಲಿನಿಂದ ಪುದಿಯೊಕ್ಕಡ ತಂಡ ಪುಳ್ಳಂಗಡ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಚೇಂದಂಡ ೨-೧ ಗೊಲಿನಿಂದ ಕಂಬೀರಂಡ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ನಿಕಿನ್ ತಿಮ್ಮಯ್ಯ (೨), ಪರಾಜಿತ ತಂಡದ ಪರ ಯೋಗೇಶ್ ಅಪ್ಪಯ್ಯ ಗೋಲು ಬಾರಿಸಿದರು.
ಕುಲ್ಲೇಟೀರ ತಂಡ ೫-೨ ಗೋಲಿನಿಂದ ಕೊಕ್ಕಂಡ ತಂಡವನ್ನು ಪರಾಭವಗೊಳಿಸಿತು. ಕುಲ್ಲೇಟೀರ ಅವಿನಾಶ್ (೨), ನಿಶ್ಚಿಲ್, ಯಶೀಕ್ (೨) ಹಾಗೂ ಕೊಕ್ಕಂಡ ಸುಬ್ಬಯ್ಯ, ಚಿರಾಘ್ ಗೋಲು ಗಳಿಸಿದರು. ಮಂಡೇಪಂಡ ತಂಡವನ್ನು ಐನಂಡ ತಂಡ ೩-೨ ಗೋಲಿನಿಂದ ಸೋಲಿಸಿತು. ವಿಜೇತ ಐನಂಡ ಪರ ಆಕಾಶ್ ಪೂವಣ್ಣ, ನಾಚಪ್ಪ (೨), ಪರಾಜಿತ ಮಂಡೇಪಂಡ ಪರ ಸಜನ್, ಗೌತಮ್ ಗೋಲು ಗಳಿಸಿದರು.
ಸಚಿನ್ ಸೋಮಣ್ಣ, ಲತೀಶ್ ಸೋಮಣ್ಣ, ಯತೀಶ್ ಸೋಮಣ್ಣ ಬಾರಿಸಿದ ಗೋಲಿನಿಂದ ಕರಿನೆರವಂಡ ತಂಡ ಚೋಯಮಾಡಂಡ ತಂಡವನ್ನು ೩-೦ ಗೋಲಿನಿಂದ ಮಣಿಸಿತು. ಬೊವೇರಿಯಂಡ ತಂಡ ಚೇಂದಿರ ತಂಡವನ್ನು ೨-೧ ಗೋಲಿನಿಂದ ಮಣಿಸಿತು. ಬೊವೇರಿಯಂಡ ಮುತ್ತಣ್ಣ, ಕವನ್ ಹಾಗೂ ಚೇಂದಿರ ಚೇತನ್ ಚಿಣ್ಣಪ್ಪ ಗೋಲು ಬಾರಿಸಿದರು. ನಿಖಿಲ್ ಕಾರ್ಯಪ್ಪ ಹೊಡೆದ ಏಕೈಕ ಗೋಲಿನಿಂದ ಐಚೆಟ್ಟೀರ ತಂಡ ಕೇಲೇಟೀರ ತಂಡವನ್ನು ಸೋಲಿಸಿತು.
=======
ಇಂದಿನ ಪಂದ್ಯ
ಮೈದಾನ ೧
* ಅರೆಯಡ- ನೆಲ್ಲಮಕ್ಕಡ (೯.೩೦)
* ಪೆಮ್ಮಂಡ- ಅಂಜಪರವAಡ (೧೦.೩೦)
* ಬೊಳ್ಳಂಡ- ಕೂತಂಡ (೧)
* ಕುಪ್ಪಂಡ (ಕೈಕೇರಿ)- ನಾಪಂಡ (೨)
ಮೈದಾನ ೨
* ಅಮ್ಮಣಿಚಂಡ- ಮುಕ್ಕಾಟೀರ (ಬೊಂದ) (೯.೩೦)
* ಮೇಚಿಯಂಡ- ನೆರವಂಡ (೧೦.೩೦)
* ಕಲಿಯಂಡ- ಮತ್ರಂಡ (೧)