ಬೆಂಗಳೂರು , ನವೆಂಬರ್ 5, 2025 : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಇಂದು 50ನೇ ಜನ್ಮದಿನದ ಸಂಭ್ರಮವಾಗಿದ್ದು, ನಾಡಿನೆಲ್ಲೆಡೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮ ಮುಗಿಲುಮುಟ್ಟಿದೆ.
![]()
ವಿಜಯೇಂದ್ರ ಅಭಿಮಾನಿಗಳು ಹುಟ್ಟುಹಬ್ಬದ ಅಂಗವಾಗಿ ನಾಡಿನೆಲ್ಲೆಡೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ನೆಚ್ಚಿನ ನಾಯಕನ ಜನ್ಮದಿನವನ್ನು ಸಂತಸದಿಂದ ಆಚರಿಸುತ್ತಿದ್ದಾರೆ.
ಕಬ್ಬು ಬೆಳೆಗಾರರ ಹೋರಾಟದ ಮಧ್ಯೆಯೇ ವಿಜಯೇಂದ್ರ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗಿದ್ದ ವಿಜಯೇಂದ್ರಗೆ ರೈತರು ವಿಷ್ ಮಾಡಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಭಾಗಗಳ ಕಬ್ಬು ಬೆಳೆಗಾರರು ಗುರ್ಲಾಪುರ ಕ್ರಾಸ್ ಬಳಿ ಕಳೆದ 6 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಯಲ್ಲಿ ವಿಜಯೇಂದ್ರ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ನಡುರಸ್ತೆಯಲ್ಲಿ ಮಲಗಿದ್ದ ವಿಜಯೇಂದ್ರಗೆ ರೈತರು ಶುಭ ಕೋರಿದ್ದಾರೆ.
ಸರ್ಕಾರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ರೈತರ ಜತೆ ನಿಲ್ಲಲು ವಿಜಯೇಂದ್ರ ನಿರ್ಧರಿಸಿದ್ದಾರೆ. ಹೀಗಾಗಿಯೇ ತಮ್ಮ ಜನ್ಮದಿನದ ಪ್ರಯುಕ್ತ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಇವತ್ತು ಬೆಳಗ್ಗೆ 11ಕ್ಕೆ ಬೆಳಗಾವಿಯ ಗುರ್ಲಾಪುರದ ಬಳಿ ರೈತರೊಂದಿಗೆ ಕಬ್ಬು ಕಟಾವು ನಡೆಸುವ ಮೂಲಕ ಹುಟ್ಟುಹಬ್ಬ ಆಚರಿಸಲಿದ್ದಾರೆ.
