ಮೈಸೂರು, ಜನವರಿ 23, 2026: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಪರೂಪದ ವಿದ್ಯಮಾನವೊಂದು ಸಂಭವಿಸಿದ್ದು, ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳ ಮೂಲದ 28 ವರ್ಷದ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ನಗರದ ಎನ್.ಆರ್. ಮೊಹಲ್ಲಾದಲ್ಲಿರುವ ಶಂಕರ್ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಈ ಅಪರೂಪದ ಹೆರಿಗೆ ನಡೆದಿದ್ದು, ಮಹಿಳೆಯು ಒಂದು ಹೆಣ್ಣು ಹಾಗೂ ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.ಆಸ್ಪತ್ರೆಯ ಮಾಹಿತಿ ಪ್ರಕಾರ, ಹೆಣ್ಣು ಮಗು 1.5 ಕೆಜಿ ತೂಕವಿದ್ದರೆ, ಗಂಡು ಮಕ್ಕಳು ಕ್ರಮವಾಗಿ 1.8 ಕೆಜಿ ಹಾಗೂ 2.5 ಕೆಜಿ ತೂಕ ಹೊಂದಿವೆ.
ಬಹಳ ದಿನಗಳ ಬಳಿಕ ನಗರದಲ್ಲಿ ಇಂತಹ ಅಪರೂಪದ ತ್ರಿವಳಿ ಜನನ ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ನರ್ಸಿಂಗ್ ಹೋಮ್‌ನ ಮಾಲೀಕರು ಹಾಗೂ ಮುಖ್ಯಸ್ಥರಾದ ಡಾ. ಭಾರತೀ ಶಂಕರ್ ಅವರು, “ಪ್ರಸ್ತುತ ಮೂವರು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಸದ್ಯಕ್ಕೆ ವೈದ್ಯರ ವಿಶೇಷ ಶುಶ್ರೂಷೆಯಲ್ಲಿರುವ ಮಕ್ಕಳನ್ನು ಇನ್ನೊಂದೆರಡು ದಿನಗಳಲ್ಲಿ ತಾಯಿಯ ಆರೈಕೆಗೆ ಒಪ್ಪಿಸಲಾಗುವುದು” ಎಂದು ತಿಳಿಸಿದ್ದಾರೆ.
