ಮೈಸೂರು, ನವೆಂಬರ್ 14, 2025 : ಇಂದು ವಿಶ್ವ ಮಧುಮೇಹ ದಿನಾಚರಣೆಯ (World Diabetes Day) ಅಂಗವಾಗಿ ಮೈಸೂರಿನಲ್ಲಿ ಭಾನವಿ ಆಸ್ಪತ್ರೆ ವತಿಯಿಂದ ಬೃಹತ್ ‘ವಾಕಥಾನ್’ (Walkathon) ಆಯೋಜಿಸಲಾಗಿತ್ತು. ಮಧುಮೇಹದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮಹತ್ತರ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ವಾಕಥಾನ್‌ಗೆ ಚಾಲನೆ ನೀಡಿದರು. ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ನಗರದ ನೂರಾರು ವಿದ್ಯಾರ್ಥಿಗಳು ಈ ಜಾಗೃತಿ ನಡಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಈ ವಾಕಥಾನ್ ಆಸ್ಪತ್ರೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದವರೆಗೆ ಸಾಗಿತು. ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಭಾನವಿ ಆಸ್ಪತ್ರೆಯ ಎಂಡಿ ಡಾ. ಎನ್ ವಿಜಯ್ ಚೆಲುವರಾಜ್ ಅವರು ಸಂಪೂರ್ಣವಾಗಿ ವಾಕಥಾನ್‌ನಲ್ಲಿ ಭಾಗಿಯಾಗಿ ಇತರರಿಗೆ ಮಾದರಿಯಾದರು.
ಮಾಧ್ಯಮದವರಿಗೆ ಹೆಲ್ತ್ ಕಾರ್ಡ್ ವಿತರಣೆ
ವಾಕಥಾನ್ ಯಶಸ್ವಿಯಾಗಿ ಮುಕ್ತಾಯಗೊಂಡ ಬಳಿಕ, ಭಾನವಿ ಆಸ್ಪತ್ರೆಯ ಎಂ ಡಿ ಡಾ. ಎನ್ ವಿಜಯ್ ಚೆಲುವರಾಜ್ ಅವರು ದೃಶ್ಯ ಮಾಧ್ಯಮದವರಿಗೆ ಸಾಂಕೇತಿಕವಾಗಿ ಹೆಲ್ತ್ ಕಾರ್ಡ್‌ಗಳನ್ನು ವಿತರಿಸಿದರು. ಮಧುಮೇಹದ ಬಗ್ಗೆ ಜಾಗೃತಿ ಮತ್ತು ಆರೋಗ್ಯ ಕಾಳಜಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ಈ ಕಾರ್ಯ ಗಮನ ಸೆಳೆಯಿತು.
