ಚಾಮರಾಜನಗರ, ಏಪ್ರಿಲ್ 7, 2026 : ಬಂಡೀಪುರ ಸಫಾರಿ ಮರು ಆರಂಭ ರೈತರ ಪಾಲಿಗೆ ಯಮಸ್ವರೂಪಿ ಆಗಿದೆ. ಮತ್ತೊಮ್ಮೆ ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ಹೆಚ್ಚಿದ್ದು, ಅನ್ನದಾತರು ರೊಚ್ಚಿಗೆದ್ದಿದ್ದಾರೆ. ಸಫಾರಿ ವಿರೋಧಿಸಿ ಇಂದಿನಿಂದ ರೈತರು ಪ್ರತಿಭಟನೆ ಆರಂಭಿಸಲಿದ್ದಾರೆ.
ಬಂಡೀಪುರ ಸಫಾರಿ ಮರುಆರಂಭಗೊಂಡ ನಂತರ ಚಾಮರಾಜನಗರದಲ್ಲಿ ಮಾನವ-ಕಾಡುಪ್ರಾಣಿ ಸಂಘರ್ಷ ಮತ್ತೆ ಹೆಚ್ಚಾಗಿದ್ದು . ಹುಲಿ, ಚಿರತೆ, ಆನೆಗಳ ದಾಳಿಯಿಂದ ರೈತರು, ಬೆಳೆ ಮತ್ತು ಜಾನುವಾರುಗಳಿಗೆ ಹಾನಿಯಾಗುತ್ತಿದೆ. ಹೀಗಾಗಿ ಸಫಾರಿ ಮುಚ್ಚುವಂತೆ ಆಗ್ರಹಿಸಿ ಮತ್ತೆ ಅನ್ನದಾತರು ಪ್ರೊಟೆಸ್ಟ್ ನಡೆಸಲಿದ್ದಾರೆ.
ಅನ್ನದಾತರು ಆಮರಣಾಂತ ಧರಣಿಗೆ ಸಜ್ಜಾಗಿದ್ದಾರೆ. ಗುಂಡ್ಲುಪೇಟೆ ಭಾಗದಲ್ಲೇ ಅತಿ ಹೆಚ್ಚು ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷಕ್ಕೆ ಬಂಡೀಪುರ ಸಫಾರಿ ರೀ ಓಪನ್ ಆಗಿರುವುದೇ ಕಾರಣ ಎಂಬ ಕೂಗು ಇದೀಗ ಹೆಚ್ಚಾಗಿದೆ. ಹೊನ್ನೂರು ಪ್ರಕಾಶ್ ಬಣದಿಂದ ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲಿ ಆಮರಣಾಂತ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ
