ನಂಜನಗೂಡು, ಫೆಬ್ರವರಿ 10, 2026 : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 38 ಜಾನುವಾರುಗಳನ್ನು ರಕ್ಷಿಸುವಲ್ಲಿ ಕವಲಂದೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನಂಜನಗೂಡು ಕಡೆಯಿಂದ ಬಂದ ಕಂಟೇನರ್ ವಾಹನವನ್ನು ಚಾಮರಾಜನಗರ ಮುಖ್ಯರಸ್ತೆಯ ಕವಲಂದೆ ಗ್ರಾಮದ ಸಮೀಪ ಪೊಲೀಸರು ತಡೆದು ಪರಿಶೀಲಿಸಿದಾಗ ಈ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.
ಕಾರ್ಯಾಚರಣೆಯ ವೇಳೆ ಕಂಟೇನರ್‌ನಲ್ಲಿ ಅಮಾನವೀಯವಾಗಿ ತುಂಬಿದ್ದ ಎಮ್ಮೆ, ಹಸು, ಎತ್ತು ಮತ್ತು ಕರುಗಳು ಸೇರಿದಂತೆ ಒಟ್ಟು 38 ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ರಕ್ಷಿಸಲಾದ ಎಲ್ಲಾ ಜಾನುವಾರುಗಳನ್ನು ಸುರಕ್ಷಿತವಾಗಿ ಮೈಸೂರಿನ ಪಿಂಜರಾಪೋಲ್‌ಗೆ ರವಾನಿಸಲಾಗಿದೆ. ಈ ಸಂಬಂಧ ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ಕವಲಂದೆ ಪೊಲೀಸರ ಈ ಭರ್ಜರಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
