ಬೆಂಗಳೂರು, ಡಿಸೆಂಬರ್ 3, 2025 : ನಟ ಕಿಚ್ಚ ಸುದೀಪ್ ಅವರ ಕುಟುಂಬವು ಶ್ರೀಲಂಕಾದಲ್ಲಿ ನಡೆದ ಸೋದರಳಿಯನ ಮದುವೆಯಲ್ಲಿ ಭಾಗವಹಿಸಿದೆ. ಅರಿಶಿನ ಶಾಸ್ತ್ರದ ಫೋಟೋಗಳು ವೈರಲ್ ಆಗಿದ್ದು, ಸುದೀಪ್, ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಸೋದರಳಿಯನ ಮದುವೆ ಶಾಸ್ತ್ರದಲ್ಲಿ ಸುದೀಪ್ ಕುಟುಂಬ ಭಾಗಿಯಾಗಿದ್ದು. ಅರಿಶಿನ ಶಾಸ್ತ್ರದಲ್ಲಿ ನವಜೋಡಿ ಜೊತೆ ತಮ್ಮ ಪ್ರೀತಿಯ ಮಗಳಿಗೂ ಸುದೀಪ್ ಮತ್ತು ಪ್ರಿಯಾ ಸುದೀಪ್ ಅರಿಶಿಣ ಹಚ್ಚಿದ್ದಾರೆ. ಅರಿಶಿನ ಶಾಸ್ತ್ರದ ಫೋಟೋಗಳನ್ನು ಸಾನ್ವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಕಳೆದ ವಾರ ಶ್ರೀಲಂಕಾದಲ್ಲಿ ಕಿಚ್ಚನ ಅಕ್ಕನ ಮಗನ ಮದುವೆ ಆಪ್ತರು ಹಾಗೂ ಕುಟುಂಬಸ್ಥರ ಮಧ್ಯೆ ಅದ್ಧೂರಿಯಾಗಿ ನಡೆದಿದೆ. ಅಕ್ಕನ ಮಗನ ಮದುವೆಯಲ್ಲಿ ಪ್ರೀತಿಯ ಮಗಳಿಗೆ ಅರಿಶಿನ ಹಚ್ಚಿರೋ ಸುದೀಪ್ ಕೆನೆ ಬಣ್ಣದ ಟ್ರೆಡಿಷನಲ್ ವೇರ್ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

ಅರಿಶಿನ ಶಾಸ್ತ್ರದಲ್ಲಿ ಮುದ್ದಾಗಿ ಕಾಣುತ್ತಿದ್ದ ಕಿಚ್ಚನ ಮಗಳು ಫಂಕ್ಷನ್ ಎಂಜಾಯ್ ಮಾಡಿದ್ದಾರೆ.ಕಿಚ್ಚ ಅವರ ಪತ್ನಿಯೂ ಮಗಳ ಕೆನ್ನೆಗೆ ಅರಶಿನ ಹಚ್ಚಿದ್ದರು. ಈ ಫೋಟೋಗಳನ್ನು ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.ಸುದೀಪ್, ಸಾನ್ವಿ ಮತ್ತು ಪ್ರಿಯಾ ಸುದೀಪ್ ಟ್ರೆಡಿಷನ್ ಲುಕ್‌ನಲ್ಲಿ ಸಖತ್ ಆಗಿ ಕಾಣಿಸುತ್ತಿದ್ದಾರೆ. ಕುಟುಂಬ ಸಮೇತರಾಗಿ ಮದುವೆ ಸಂಭ್ರಮವನ್ನು ಸುದೀಪ್ ಎಂಜಾಯ್ ಮಾಡಿದ್ದಾರೆ.
ಕಳೆದ 1 ತಿಂಗಳಿಂದ ಸುದೀಪ್ ಕೇವಲ big ಬಾಸ್ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಬಿಲ್ಲ ರಂಗ ಭಾಷಾ ಸಿನಿಮಾ ಶೂಟಿಂಗ್ ಜನವರಿಯಲ್ಲಿ ಶುರುವಾಗುತ್ತಿದ್ದು, ಡಿ. 25ಕ್ಕೆ ಸುದೀಪ್ ನಟನೆಯ ಮಾರ್ಕ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.
