PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ತಂಬಾಕು ರೈತರ ಸಂಕಷ್ಟಕ್ಕೆ ಕೇಂದ್ರ ಸಚಿವರ ಸ್ಪಂದನೆ: ಹಳೆ ದರದಲ್ಲೇ ಖರೀದಿ ಮಾಡಲು ಮಂಡಳಿ ಹಾಗೂ ವರ್ತಕರಿಗೆ ಸೂಚನೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ತಂಬಾಕು ರೈತರ ಸಂಕಷ್ಟಕ್ಕೆ ಕೇಂದ್ರ ಸಚಿವರ ಸ್ಪಂದನೆ: ಹಳೆ ದರದಲ್ಲೇ ಖರೀದಿ ಮಾಡಲು ಮಂಡಳಿ ಹಾಗೂ ವರ್ತಕರಿಗೆ ಸೂಚನೆ
ಮುಖಪುಟಮೈಸೂರು ನಗರರಾಜಕೀಯ

ತಂಬಾಕು ರೈತರ ಸಂಕಷ್ಟಕ್ಕೆ ಕೇಂದ್ರ ಸಚಿವರ ಸ್ಪಂದನೆ: ಹಳೆ ದರದಲ್ಲೇ ಖರೀದಿ ಮಾಡಲು ಮಂಡಳಿ ಹಾಗೂ ವರ್ತಕರಿಗೆ ಸೂಚನೆ

Prathinidhi News
Last updated: March 2, 2026 4:26 pm
Prathinidhi News
Published March 2, 2026
Share
SHARE

ಮೈಸೂರು, ಮಾರ್ಚ್‌ 2, 2026 : ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮೈಸೂರಿನಲ್ಲಿ ರಾಜ್ಯ ರಾಜಕಾರಣ, ತಂಬಾಕು ಬೆಳೆಗಾರರ ಸಮಸ್ಯೆ ಹಾಗೂ ಅಂತರಾಷ್ಟ್ರೀಯ ಸಂಘರ್ಷದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.

ಫೋನ್ ಟ್ಯಾಪಿಂಗ್ ವಿವಾದ ಮತ್ತು ರಾಜ್ಯ ರಾಜಕಾರಣ: ರಾಜ್ಯ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರದ ಚರ್ಚೆಗಳ ನಡುವೆಯೇ ಸಚಿವರು ಫೋನ್ ಟ್ಯಾಪಿಂಗ್ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ. “ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಿನ ಸರ್ಕಾರದಲ್ಲೂ ಅದು ಮುಂದುವರಿದಿದೆ” ಎಂದು ಸ್ಫೋಟಕ ಹೇಳಿಕೆ ನೀಡಿದ ಅವರು, ಕೆಲವರು ಫೋನ್ ಟ್ಯಾಪಿಂಗ್ ಮಾಡಿಯೂ ಪತಿವ್ರತೆಯಂತೆ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಸ್ವಪಕ್ಷದ ಶಾಸಕರು ಮತ್ತು ಸಚಿವರ ಮೇಲೆಯೇ ಗುಪ್ತಚರ ಇಲಾಖೆ ಮೂಲಕ ನಿಗಾ ಇಡುತ್ತಿರುವುದು ಇದೇ ಮೊದಲು. ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಿರುವವರು ತಮ್ಮದೇ ಸರ್ಕಾರದ ಮೇಲೆ ಗುಪ್ತಚಾರಿಕೆ ಆರಂಭಿಸಿರುವುದು ದೊಡ್ಡ ದುರಂತ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಪರಿಹಾರ: ಸಂಕ್ರಾಂತಿ ಹಬ್ಬದ ಬಳಿಕ ತಂಬಾಕು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ಪರವಾಗಿ ಸಚಿವರು ಧ್ವನಿ ಎತ್ತಿದ್ದಾರೆ. ಮೈಸೂರಿನಲ್ಲಿ ನಡೆದ ತಂಬಾಕು ಮಂಡಳಿ ಮತ್ತು ಖರೀದಿದಾರರ ಸಭೆಯಲ್ಲಿ ಮಾತನಾಡಿದ ಅವರು, ಸಂಕ್ರಾಂತಿಗಿಂತ ಮುಂಚೆ ಇದ್ದ ಬೆಲೆಯಲ್ಲೇ ತಂಬಾಕು ಖರೀದಿಸುವಂತೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರೈತರ ಪರವಾಗಿ ಸಭೆಯಲ್ಲಿ ಪ್ರಸ್ತಾಪಿಸಿದ ಅಂಶಗಳ ಬಗ್ಗೆ ಗಮನಹರಿಸಲಾಗಿದ್ದು, ನಾಳೆ ರೈತ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಸಿಗರೇಟ್ ಬೆಲೆ ಏರಿಕೆಯಿಂದಾಗಿ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಕಂಪನಿಗಳು ನೀಡುತ್ತಿರುವ ಕಾರಣದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಮುಂದಿನ ಎರಡರಿಂದ ಮೂರು ದಿನಗಳಲ್ಲಿ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಯುದ್ಧ ಪೀಡಿತ ಪ್ರದೇಶಗಳಲ್ಲಿ ಕನ್ನಡಿಗರ ರಕ್ಷಣೆ: ಇಸ್ರೇಲ್-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಕುರಿತು ಮಾತನಾಡಿದ ಕುಮಾರಸ್ವಾಮಿ ಅವರು, ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ ಎಲ್ಲರನ್ನು ತಕ್ಷಣವೇ ಕರೆತರುವುದು ಸವಾಲಾಗಿದೆ ಎಂದರು. ಯುದ್ಧ ಸಂಪೂರ್ಣ ನಿಂತು ವಿಮಾನಗಳ ಸಂಚಾರ ಆರಂಭವಾದರೆ ಮಾತ್ರ ಸುರಕ್ಷಿತವಾಗಿ ಕರೆತರಲು ಸಾಧ್ಯ. ದುಬೈನಲ್ಲಿರುವ ಕನ್ನಡಿಗರು ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿದ್ದಾರೆ ಮತ್ತು ಕೇಂದ್ರ ಸರ್ಕಾರವು ಭಾರತೀಯರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಿದೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಮಾಹಿತಿ ನೀಡಿದರು.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ನಗರ

ಮೈಸೂರು : ಕೆನರಾ ಗೋಲ್ಡ್‌ ಸ್ಕಾಮ್‌ ಪ್ರಕರಣ ; ಕಡೆಗೂ ಬಿತ್ತು ಅಕ್ಕಸಾಲಿಗ ಅಶ್ವಿನ್‌ ಆಚಾರ್‌ ವಿರುದ್ಧ FIR

December 20, 2025
ಬೆಂಗಳೂರುಮುಖಪುಟ

ಚಳಿ ಗಾಳಿಗೆ ಉತ್ತರ ಕರ್ನಾಟಕ ತತ್ತರ ;  ರಾಜ್ಯದಲ್ಲಿ 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

December 22, 2025
ಮುಖಪುಟಮೈಸೂರು ನಗರ

ಮೈಸೂರು : ದಿಲ್ಲಿಯ ಕಾರು ಬ್ಲ್ಯಾಸ್ಟ್ ಗೆ ಖಂಡನೆ.. ಉಗ್ರರ ಸದೆ ಬಡಿಯುವಂತೆ ಹಿಂದೂ ಜಾಗರಣ ವೇದಿಕೆ ಪ್ರೊಟೆಸ್ಟ್..

November 15, 2025
ಮುಖಪುಟಮೈಸೂರು ನಗರರಾಜಕೀಯ

ಬಿಹಾರದಲ್ಲಿ ಎನ್‌ಡಿಎಗೆ ಭರ್ಜರಿ ಗೆಲುವು: ಪ್ರಧಾನಿ ಮೋದಿ ನಾಯಕತ್ವಕ್ಕೆ ಸಿಕ್ಕ ಫಲ – ಸಂಸದ ಯದುವೀರ್ ಒಡೆಯರ್

November 15, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?