ಮೆಕ್ಸಿಕೋ, ಫೆಬ್ರವರಿ 24, 2026 : ಮೆಕ್ಸಿಕೋದಲ್ಲಿ ಪರಿಸ್ಥಿತಿ ನಿಗಿನಿಗಿ ಕೆಂಡವಾಗಿದೆ. ಡ್ರಗ್ಸ್ ದೊರೆ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಮುಖ್ಯಸ್ಥ ನೆಮೆಸಿಯೊ ಒಸೆಗುರಾ ಸೆರ್ವಾಂಟೆಸ್ ಹತ್ಯೆಯ ನಂತರ ಮೆಕ್ಸಿಕೋದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ದೇಶದೆಲ್ಲೆಡೆ ಹೆದ್ದಾರಿಗಳ ಬಂದ್ ಜೊತೆಗೆ ವಿಮಾನಗಳ ಸಂಚಾರದಲ್ಲೂ ವ್ಯತ್ಯಯಕ್ಕೆ ಕಾರಣವಾಗಿದೆ. ಡ್ರಗ್ ಮಾಫಿಯಾ ಗುಂಪು ದೇಶದೆಲ್ಲೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಿವೆ. ಹೀಗಾಗಿ ಮೆಕ್ಸಿಕೋದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಡ್ರಗ್ ಕಾರ್ಟೆಲ್‌ಗಳಿಗೆ ಕುಖ್ಯಾತಿ ಗಳಿಸಿರುವ ಮೆಕ್ಸಿಕೋ, ತನ್ನ ನೆಲದಿಂದ ಮಾದಕವಸ್ತು ಕಳ್ಳಸಾಗಾಣೆಯನ್ನು ನಿರ್ಮಲನೆ ಮಾಡುವ ಪಣ ತೊಟ್ಟಿದೆ. ಅದರ ಭಾಗವಾಗಿ ದೇಶದ ಕುಖ್ಯಾತ ಡ್ರಗ್ ದೊರೆ ನೆಮೆಸಿಯೊ ಎಲ್ ಮೆಂಚೊ ಒಸೆಗುರಾನನ್ನು, ಮೆಕ್ಸಿಕೋ ಸೇನೆ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದೆ.
ಎಲ್ ಮೆಂಚೊ ಮೆಕ್ಸಿಕೋದ ಕುಖ್ಯಾತ ಡ್ರಗ್ ದೊರೆಯಾಗಿದ್ದನು . ಆತನ ಬಂಧನಕ್ಕೆ ಮೆಕ್ಸಿಕೋ ಸರ್ಕಾರ 15 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಿತ್ತು. ಎಲ್ ಮೆಂಚೊ ಅತ್ಯಂತ ಭಯಾನಕ ದೊರೆಯಾಗಿದ್ದನು.ಈತನ ಬಂಧನಕ್ಕೆ ಹಲವು ವರ್ಷಗಳಳಿಂದ ಪ್ಲಾನ್ ರೂಪಿಸಲಾಗಿತ್ತು
ಮೆಕ್ಸಿಕೋ ದೇಶವೇ ಘೋಷಣೆ ಮಾಡಿದ್ದಂತೆ, ಮೆಕ್ಸಿಕೋ ದೇಶಕ್ಕೆ ಡ್ರಗ್ ಕಾರ್ಟೆಲ್ ವಿಚಾರವಾಗಿ ಮೋಸ್ಟ್ ವಾಟೆಂಡ್ ಆಗಿದ್ದ ಎಲ್ ಮೆಂಚೊ ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆಗೆ ಮೊದಲು ಮೆಕ್ಸಿಕೋ ಭದ್ರತಾ ಪಡೆಗಳು ಸಾಕಷ್ಟು ಪರದಾಡಿದ್ದವು, ಅದರಲ್ಲೂ ಎಲ್ ಮೆಂಚೊ ಪತ್ತೆಗಾಗಿ ಮಾಡಿದ್ದ ಸಾಹಸ ಕೈಕೊಟ್ಟಿತ್ತು. ಆದರೆ ಅಂತಿಮವಾಗಿ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ ಎಂದರೆ ಸಿಐಎ ನೀಡಿರುವ ಮಾಹಿತಿ ಆಧರಿಸಿ, ಎಲ್ ಮೆಂಚೊ ಅಡಗಿದ್ದ ಸ್ಥಳವನ್ನು ಪಕ್ಕಾ ಪತ್ತೆಹಚ್ಚಿ ಹತ್ಯೆ ಮಾಡಿವೆ.
