PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಓಣಂ ಪ್ರಯುಕ್ತ ಮೈಸೂರು-ಕಣ್ಣೂರು-ಬೆಂಗಳೂರಿಗೆ ವಿಶೇಷ ಎಕ್ಸ್ಪ್ರೆಸ್ಸ್ ರೈಲು‌ !
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಓಣಂ ಪ್ರಯುಕ್ತ ಮೈಸೂರು-ಕಣ್ಣೂರು-ಬೆಂಗಳೂರಿಗೆ ವಿಶೇಷ ಎಕ್ಸ್ಪ್ರೆಸ್ಸ್ ರೈಲು‌ !
ಮುಖಪುಟಮೈಸೂರು ನಗರ

ಓಣಂ ಪ್ರಯುಕ್ತ ಮೈಸೂರು-ಕಣ್ಣೂರು-ಬೆಂಗಳೂರಿಗೆ ವಿಶೇಷ ಎಕ್ಸ್ಪ್ರೆಸ್ಸ್ ರೈಲು‌ !

Prathinidhi News
Last updated: July 22, 2026 7:29 pm
Prathinidhi News
Published July 22, 2026
Share
SHARE

ಮೈಸೂರು, ಜುಲೈ 22, 2026 : ಓಣಂ ಹಬ್ಬದ ವೇಳೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಹಾಗೂ ಸುಗಮ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು, ನೈರೈತ್ಯ ರೈಲ್ವೆಯು ಮೈಸೂರು-ಕಣ್ಣೂರು-ಬೆಂಗಳೂರು ಕಂಟೋನ್ಮೆಂಟ್ ನಡುವೆ ತಲಾ ಎರಡು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಕಾರ್ಯಾಚರಣೆ ನಡೆಸಲಿದೆ.

ರೈಲು ಸಂಖ್ಯೆ 06227 ಮೈಸೂರು-ಕಣ್ಣೂರು ವಿಶೇಷ ಎಕ್ಸ್ಪ್ರೆಸ್ ಅ.25ರಂದು (ಮಂಗಳವಾರ) ರಾತ್ರಿ 10.30ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 2ಕ್ಕೆ ಕಣ್ಣೂರು ತಲುಪಲಿದೆ. ಹಿಂತಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06228 ಕಣ್ಣೂರು-ಬೆಂಗಳೂರು ದಂಡು ವಿಶೇಷ ಎಕ್ಸ್ ಪ್ರೆಸ್ ದಿನಾಂಕ ಅ.26ರಂದು ಸಂಜೆ 6.25ಕ್ಕೆ ಕಣ್ಣೂರಿನಿಂದ ಹೊರಟು, ಮರುದಿನ 8.35ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ರೈಲು ಸಂಖ್ಯೆ 06229 ಮೈಸೂರು-ಕಣ್ಣೂರು ವಿಶೇಷ ಎಕ್ಸ್ಪ್ರೆಸ್ ಆ.29ರಂದು (ಶನಿವಾರ) ರಾತ್ರಿ 11.55ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 5.50ಕ್ಕೆ ಕಣ್ಣೂರು ತಲುಪಲಿದೆ. ಹಿಂತಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06230 ಕಣ್ಣೂರು-ಬೆಂಗಳೂರು ದಂಡು ವಿಶೇಷ ಎಕ್ಸ್ಪ್ರೆಸ್ ಆ.30ರಂದು (ಭಾನುವಾರ) ಸಂಜೆ 7.45ಕ್ಕೆ ಕಣ್ಣೂರಿನಿಂದ ಹೊರಟು ಮರುದಿನ ಬೆಳಿಗ್ಗೆ 10ಕ್ಕೆ ಬೆಂಗಳೂರು ಕಂಟೋನ್ಮೆAಟ್ ತಲುಪಲಿದೆ.
ಈ ರೈಲುಗಳು ಮಾರ್ಗ ಮಧ್ಯೆ ಮಂಡ್ಯ, ಕೆಎಸ್‌ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪರು, ಪೊದನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಶೋರನೂರು ಜಂಕ್ಷನ್, ತಿರೂರು, ಕೋಝಿಕ್ಕೋಡ್, ವಡಕರ ಮತ್ತು ತಲಕ್ಕೇರಿ ನಿಲ್ದಾಣಗಳಲ್ಲಿ ನಿಲ್ಲಿಸಲಿವೆ. ಹಿಂತಿರುಗುವ ದಿಕ್ಕಿನಲ್ಲಿ ಸಂಚರಿಸುವ ಕಣ್ಣೂರು-ಬೆಂಗಳೂರು ಕಂಟೋನ್ಮAಟ್ ವಿಶೇಷ ರೈಲು ಬೆಂಗಳೂರು ಕಂಟೋನ್ಮAಟ್ ನಿಲ್ದಾಣದಲ್ಲಿ ಪ್ರಯಾಣ ಅಂತ್ಯಗೊಳಿಸಲಿದೆ.

ಈ ರೈಲು ಒಟ್ಟು 20 ಬೋಗಿಗಳು ಇರಲಿದ್ದು, ಅವುಗಳಲ್ಲಿ 1 ಎಸಿ ಟು ಟಯರ್ ಬೋಗಿ, 2 ಎಸಿ ತ್ರಿ ಟಯರ್ ಬೋಗಿಗಳು, 9 ಕ್ಲೀಪರ್ ಕ್ಲಾಸ್ ಬೋಗಿಗಳು, 6 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡಿರಲಿದೆ ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಕ್ರೈಂ ಸುದ್ದಿಗಳುನಂಜನಗೂಡುಮುಖಪುಟ

ನಂಜನಗೂಡಿನಲ್ಲಿ ಸರಣಿ ಕಳ್ಳತನ: ಪೊಲೀಸ್ ಠಾಣೆ ಸಮೀಪವೇ 14 ಅಂಗಡಿಗಳ ಬೀಗ ಮುರಿದ ಖದೀಮರು!

December 31, 2025
ಮುಖಪುಟಮೈಸೂರು ನಗರರಾಜಕೀಯ

ಏಕತೆಗಾಗಿ ನಡಿಗೆ : ಸರ್ದಾರ್ ಪಟೇಲ್ 150ನೇ ಜಯಂತಿ ಅಂಗವಾಗಿ ಮೈಸೂರಿನಲ್ಲಿ ವಾಕಥಾನ್

November 15, 2025
ಬೆಂಗಳೂರುಮುಖಪುಟರಾಜಕೀಯ

‘ನಂದಿನಿ’ ತುಪ್ಪಕ್ಕೆ ವಿದೇಶದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್.. ಸಿಎಂ ಸಿದ್ದರಾಮಯ್ಯ ಹರ್ಷ..!

November 25, 2025
ಮುಖಪುಟಮೈಸೂರು ನಗರ

ಸುವರ್ಣ ವಿಧಾನಸೌಧದ ಆವರಣದಲ್ಲಿ ಉದ್ಯಾನವನ ಹಾಗೂ ಕಾರಂಜಿಯ ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ !

December 11, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?