ಬೆಂಗಳೂರು, ಜನವರಿ 14,2026 : ಟಾಕ್ಸಿಕ್ ಸಿನಿಮಾ ಟೀಸರ್ ರಿಲೀಸ್ ಬಳಿಕ ನಟ ಯಶ್ ಗೆ ಮೇಲಿಂದ ಮೇಲೆ ಸಂಕಷ್ಟ ಎದುರಾಗಿದೆ.ಇದೀಗ ನಟ ಯಶ್ ಮನೆ ಮುಂದೆ ಟಾಕ್ಸಿಕ್ ಸಿನಿಮಾದ ಬ್ಯಾನರ್ ಕಟ್ಟಿದ ವಿಚಾರಕ್ಕೆ ಎಫ್ ಐ ಆರ್ ದಾಖಲಾಗಿದೆ. ಹ್ರೈಗ್ರೌಂಡ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಾಶಯ ಕೋರಿ ಫ್ಲೆಕ್ಸ್ ಹಾಕಿದ್ದರು. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತೆ ಬ್ಯಾನರ್ ಹಾಕಲಾಗಿದೆ ಎಂಬ ಆರೋಪವಿದೆ.ಬೆಂಗಳೂರಿನ ಗಾಲ್ಫ್ ಕ್ಲಬ್ ಮುಂದೆ ಇರುವ ನಟ ಯಶ್ ನಿವಾಸದ ಎದುರು ಹುಟ್ಟು ಹಬ್ಬದ ಶುಭಾಶಯ ಕೋರಿ ಬ್ಯಾನರ್, ಫ್ಲೆಕ್ಸ್ ಹಾಕಲಾಗಿದ್ದು, ವೇಣು ಕ್ರಿಯೇಶನ್ಸ್ ವಿರುದ್ಧ ಕೇಸ್ ದಾಖಲಾಗಿದೆ.
ನಟ ಯಶ್ ಅವರ ಹೆಸರು ಉಲ್ಲೇಖಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಜಿಬಿಎ ವಿಭಾಗದ ಪೂಜಾರಪ್ಪ ಎಂಬುವವರು ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಒಟ್ನಲ್ಲಿ ಯಶ್ ಟೈಮ್ ಬ್ಯಾಡ್ ಆಗಿದ್ದು ಒಂದು ವಾರದ ಅವಧಿಯಲ್ಲಿ ಯಶ್ ಗೆ ಸಂಬಂಧಿಸಿದಂತೆ ಒಟ್ಟು ಮೂರು ದೂರು ದಾಖಲಾದಂತಾಗಿದೆ.
