ಮೈಸೂರು, ಜನವರಿ 14, 2026: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಿಂಜಾರಪೋಲ್ ನಲ್ಲಿ ಅಪೂರ್ವ ಸ್ನೇಹ ಬಳಗ ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಗೋಪಾಲಕರಿಗೆ ಎಳ್ಳು ಬೆಲ್ಲ ಹಂಚಿ ಹಾಗೂ ಗೋವಾ ಗಳಿಗೆ ಬೆಲ್ಲ ವಿತರಿಸಿ ಸಂಕ್ರಾಂತಿ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಪೂರ್ವ ಸುರೇಶ್ ರವರು ಸುಗ್ಗಿಯ ಈ ಸಮಯದಲ್ಲಿ ನಾಡಿನ ರೈತರಿಗೆ ಶುಭವನ್ನು ಕೋರಿದರು ಮತ್ತು ನಾಡಿನಲ್ಲಿ ಸುಖ ಸಂತೋಷ ಸಮೃದ್ಧಿ ನೆಲೆಸಲಿ ಎಂದು ಹಾರೈಸಿ ಗೋವುಗಳನ್ನು ಸಂರಕ್ಷಿಸಿ, ಪೋಷಿಸಬೇಕೆಂದು ಈ ಮೂಲಕ ಸಮಾಜಕ್ಕೆ ಮನವಿ ಮಾಡಿದರು.
ಈ ವೇಳೆ ಆನಂದ್ ಜಟ್ಟಿ ಪ್ರಸಾದ, ದೂರ ರಾಜಣ್ಣ, ವಿನೋದ್, ಶಿವು , ಆದರ್ಶ, ಶ್ರೀಕಾಂತ್ ಕಶ್ಯಪ್, ರಾಮಚಂದ್ರ, ಶಿವಲಿಂಗಸ್ವಾಮಿ ,ಜಯಸಿಂಹ ಹಾಗೂ ಇನ್ನಿತರರು ಸಂಭ್ರಮದಲ್ಲಿ ಭಾಗಿಯಾಗಿದ್ದರು.
