ಹಾಸನ, ಜನವರಿ 13, 2026 : ಶಬರಿಮಲೆ ಯಾತ್ರೆಯಿಂದ ವಾಪಸ್ ಬಂದ ಪತಿರಾಯ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಹಾಸನದ ಆಲೂರು ತಾಲೂಕಿನಲ್ಲಿ ನಡೆದಿದೆ.

ಯಡೂರು ಗ್ರಾಮದಲ್ಲಿ ಘಟನೆ ನಡೆದಿದ್ದು ಪತ್ನಿ ರಾಧಾ(40) ಮೃತ ದುರ್ದೈವಿಯಾಗಿದ್ದಾರೆ. ಶವವನ್ನು ಪತಿ ಕುಮಾರ್ ನದಿಗೆ ಎಸೆದಿದ್ದ ಎನ್ನಲಾಗಿದೆ. ಜನವರಿ 10ರರಂದು ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜನವರಿ ಮೊದಲ ವಾರ ಕುಮಾರ್ ಶಬರಿಮಲೆಗೆ ತೆರಳಿದ್ದನು. ಇದಕ್ಕೂ ಮುನ್ನ ಇರುಮುಡಿ ಕಟ್ಟುವಾಗ ಪತ್ನಿ ಸ್ಥಾನದಲ್ಲಿ ಬೇರೆ ಮಹಿಳೆಯಿಂದ ಪೂಜೆ ನಡೆಸಲಾಗಿತ್ತು. ಈ ವಿಚಾರವನ್ನು ಪ್ರಶ್ನಿಸಲು ರಾಧಾ ಮನೆಗೆ ಬಂದಿದ್ದರು. ರೊಚ್ಚಿಗೆದ್ದ ಕುಮಾರ್ ರಾಧಾಳನ್ನು ಹತ್ಯೆ ಮಾಡಿದ್ದಾನೆ. ಈ ಸಂಬಂಧ ಕೇಸ್ ದಾಖಲಿಸಿರೋ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
