ಮೈಸೂರು, ಜನವರಿ 6, 2026 : ಮೈಸೂರಿನ ಹಳೇ ಕೋರ್ಟ್ ಗೆ ಬಾಂಬ್ ಬ್ಲ್ಯಾಸ್ಟ್ ಮಾಡುವ ಬೆದರಿಕೆ ಇ ಮೇಲ್ ಬಂದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಮಂಗಳವಾರ ಬೆಳಿಗ್ಗೆ 10. 45 ಗಂಟೆ ಸುಮಾರಿಗೆ ಇಮೇಲ್ ಬಂದಿದ್ದು, ನ್ಯಾಯಾಧೀಶರು ಹಾಗೂ ಕಕ್ಷಿದಾರರು ಮತ್ತು ವಕೀಲರು ಎಲ್ಲರೂ ಕೋರ್ಟ್ ಆವರಣದಿಂದ ಹೊರಗಡೆಗೆ ಓಡೋಡಿ ಬಂದಿದ್ದಾರೆ. ಮೈಸೂರಿನ ಚಾಮರಾಜಪುರಂ ಮತ್ತು ಕೆ ಜಿ ಕೊಪ್ಪಲಿನಲ್ಲಿರುವ ನ್ಯಾಯಾಲಯಗಳ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಎರಡೂ ನ್ಯಾಯಲಯಗಳಲ್ಲಿಯೂ ಬಾಂಬ್ ತಪಾಸಣಾ ದಳ ಹಾಗೂ ಶ್ವಾನ ದಳ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿ ಸೀಮಾ ಲಾಟ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಹಳೇ ಕೋರ್ಟ್ ಮುಂದೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಗಳನ್ನು ಬಂದ್ ಮಾಡಿ ಇಂಚಿಂಚು ಸ್ಥಳವನ್ನು ಪರಿಶೀಲನೆ ನಡೆಸಲಾಗಿದೆ.
