PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಬೆಂಗಳೂರು : ಜನವರಿ 15 ರಿಂದ 26 ರವರೆಗೆ ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಬೆಂಗಳೂರು > ಬೆಂಗಳೂರು : ಜನವರಿ 15 ರಿಂದ 26 ರವರೆಗೆ ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನ
ಬೆಂಗಳೂರುಮುಖಪುಟ

ಬೆಂಗಳೂರು : ಜನವರಿ 15 ರಿಂದ 26 ರವರೆಗೆ ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನ

Prathinidhi News
Last updated: December 18, 2025 3:56 pm
Prathinidhi News
Published December 18, 2025
Share
SHARE

ಬೆಂಗಳೂರು, ಡಿಸೆಂಬರ್‌ 18, 2025 : ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳುವ ಫಲಪುಷ್ಪ ಪ್ರದರ್ಶನಕ್ಕೆ ಲಾಲ್ ಬಾಗ್ ನಲ್ಲಿ ಸಕಲ  ಸಿದ್ಧತೆ ಆರಂಭವಾಗಿದೆ.

ಆಕರ್ಷಕ ಫಲಪುಷ್ಪ ಪ್ರದರ್ಶನದ ನಾಡಿನ ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕುರಿತ ಥೀಮ್ ಆಧರಿಸಿ ಹತ್ತು ದಿನಗಳ ಪ್ರದರ್ಶನ ನಡೆಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಜನವರಿ 15 ರಿಂದ 26 ರವರೆಗೆ ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಇಡೀ ಪ್ರದರ್ಶನ ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಮತ್ತು ಪರಿಸರ ಪ್ರೇಮವನ್ನು ಈ ಪ್ರದರ್ಶನದಲ್ಲಿ ಅನಾವರಣಗೊಳಿಸಲು ಯೋಜಿಸಲಾಗಿದೆ

ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ಬೆಟ್ಟದ ಮಾದರಿಯಲ್ಲಿ ನಿಸರ್ಗದ ಪ್ರತಿರೂಪ ನಿರ್ಮಿಸಲಾಗುತ್ತಿದ್ದು,ನಿಸರ್ಗದತ್ತವಾಗಿ ತೇಜಸ್ವಿಯವರ ಮುಖ ಕಾಣುವಂತೆ ಮಾಡಿ, ಅದರ ಮಧ್ಯೆ ಜಲಪಾತ, ಝರಿಗಳನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಫ್ಲವರ್ ಶೋ ನಲ್ಲಿ ತೇಜಸ್ವಿಯವರ ಚಟುವಟಿಕೆಗಳಾದ ಮೀನು ಹಿಡಿಯುವುದು, ಜೇನುಗೂಡಿನ ಬಗ್ಗೆ ಅವರಿಗಿದ್ದ ಅಭಿರುಚಿಯ ವಿಶೇಷ ಆಕರ್ಷಣೆಗಳಿರಲಿವೆ. ಜತೆಗೆ, ತೇಜಸ್ವಿಯವರ ನೆಚ್ಚಿನ ಶ್ವಾನ, ಪ್ರಾಣಿ, ಪಕ್ಷಿಗಳು, ಕೀಟಗಳನ್ನು ಹೂವುಗಳಲ್ಲಿ ಮೂಡಿಸಲು ಇಲಾಖೆ ಉದ್ದೇಶಿಸಿದೆ.

- ಜಾಹೀರಾತು -

ಇನ್ನು, ಪ್ರಮುಖವಾಗಿ ತೇಜಸ್ವಿ ಅವರ ಕ್ಯಾರಿಕೇಚರ್‌ಗಳ ಸೆಲ್ಫಿ ಪಾಯಿಂಟ್‌ಗಳು, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ನಾಟಕ, ಸಂವಾದಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ನಡೆಯಲಿದೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಚಾಮರಾಜನಗರಮುಖಪುಟ

ಚಾಮರಾಜನಗರ: ಉಪ ಲೋಕಾಯುಕ್ತರ ಮಿಂಚಿನ ರೌಂಡ್ಸ್ ; ಆಸ್ಪತ್ರೆ, ಹಾಸ್ಟೆಲ್, ನಗರ ಸ್ವಚ್ಛತೆ ಬಗ್ಗೆ ಅಸಮಾಧಾನ

November 29, 2025
ನವದೆಹಲಿಮುಖಪುಟ

“ಮುಖಿ” ಚೀತಾಗೆ ಐದು ಮರಿಗಳು ಜನನ..! ಚೀತಾಗಳ ಸಂತಾನಾಭಿವೃದ್ಧಿ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ..

November 21, 2025
ಮುಖಪುಟಮೈಸೂರು ನಗರರಾಜಕೀಯ

ಮೈಸೂರು: ನಾಲೆಗೆ ಬಿದ್ದು ಮೃತಪಟ್ಟ ವಿದ್ಯಾರ್ಥಿನಿಯರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿತರಣೆ

March 5, 2026
ಮಂಗಳೂರುಮುಖಪುಟರಾಜಕೀಯ

ವೇಣುಗೋಪಾಲ್ ಅವರೊಂದಿಗೆ ರಾಜಕೀಯ ಚರ್ಚೆಯಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

December 3, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?