ಮೈಸೂರು, ನವೆಂಬರ್ 29, 2025 : ಸಿಎಂ ಸಿದ್ದರಾಮಯ್ಯ ತವರಲ್ಲಿ ಡಿಕೆಶಿ ಬೆಂಬಲಿಗರು ಬೈಕ್ ಜಾಥಾ ನಡೆಸಿದ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಹುಣಸೂರು ರಸ್ತೆಯಲ್ಲಿ ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ಜಲದರ್ಶಿನಿ ಅತಿಥಿ ಗೃಹದಲ್ಲಿ ಆಯೋಜಿಸಿದ್ದ ಸಭೆ ಮುಗಿಯುತ್ತಿದ್ದಂತೆ ಹುಣಸೂರು ರಸ್ತೆಯಲ್ಲಿ ಜಮಾಯಿಸಿದ ಸಿದ್ದರಾಮಯ್ಯ ಬೆಂಬಲಿಗರು, ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸುವ ಮೂಲಕ ಸಿದ್ದರಾಮಯ್ಯರನ್ನು ಪೂರ್ಣಾವಧಿಗೆ ಮುಖ್ಯಮಂತ್ರಿಯನ್ನಾಗಿ ಮುಂದುವರಿಸುವಂತೆ ಒತ್ತಾಯಿಸಿದರು. ಈ ವೇಳೆ ದಿಢೀರ್ ಪ್ರತಿಭಟನೆಯಿಂದಾಗಿ ಹುಣಸೂರು ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾದ ಕಾರಣ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ, ಅನುಮತಿ ಇಲ್ಲದೇ ಪ್ರತಿಭಟನೆ ಮಾಡವಂತಿಲ್ಲ ಎಂದು ಮನವರಿಕೆ ಮಾಡಿ ಪ್ರತಿಭಟನಾಕಾರರನ್ನು ತೆರವುಗೊಳಿಸಿದರು. ಇದೇ ವೇಳೆ ಆಗಮಿಸಿದ ಆಂಬ್ಯುಲೆನ್ಸ್ ಮುಂದೆ ಸಾಗಲು ಪ್ರತಿಭಟನಾಕಾರರು ಅನುವು ಮಾಡಿಕೊಟ್ಟರು.
