ಬೆಂಗಳೂರು, ನವೆಂಬರ್ 27, 2025 : ರಾಜಧಾನಿ ಬೆಂಗಳೂರಿನ ಹೆಮ್ಮೆಯ ಕಬ್ಬನ್ ಪಾರ್ಕ್ ನಲ್ಲಿ ಇದೇ ಮೊದಲ ಬಾರಿಗೆ ಫ್ಲವರ ಶೋ (flower show) ಆಯೋಜನೆ ಮಾಡಲಾಗಿದ್ದು, ಇಂದಿನಿಂದ ಡಿಸೆಂಬರ್ 7 ರವರೆಗೆ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಪುಷ್ಪ ಪ್ರದರ್ಶನ ಉದ್ಘಾಟನೆ ಆಗಲಿದೆ. ಇನ್ನು, ಪುಷ್ಪ ಪ್ರದರ್ಶನಕ್ಕೆ ಟಿಕೆಟ್ ದರ ನಿಗದಿ ಪಡಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ. ಹಾಗೂ ರಜಾ ದಿನಗಳಲ್ಲಿ ವಯಸ್ಕರಿಗೆ 100 ರೂ., ಮಕ್ಕಳಿಗೆ 30 ರೂ. ದರ ನಿಗದಿ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.
ಕಬ್ಬನ್ ಪಾರ್ಕ್ ಪ್ರದರ್ಶನದಲ್ಲಿ ಹೈಡ್ರಾಂಜಿ, ಕ್ಯಾಲಲಿಲಿ, ಆರ್ಕಿಟ್ಸ್, ಟ್ಯೂಬ್ರೆಟ್ಸ್ ಬೆಗೆನಿಯಾ ಸೇರಿದಂತೆ 105ಕ್ಕೂ ವಿಶೇಷವಾದ ವಾರ್ಷಿಕ ಹೂವುಗಳ ಬಳಕೆ ಮಾಡಲಾಗಿದೆ. ಇದರ ಜತೆಗೆ
ಚಿತ್ರಕಲಾ ಪ್ರದರ್ಶನ, ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಕಾರ್ಯಕ್ರಮ, ಸೇನಾ ಶಸ್ತ್ರಾಸ್ತ್ರ ಹಾಗೂ ಉಪಕರಣಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
