ಬೆಂಗಳೂರು, ನವೆಂಬರ್ 13, 2025 : ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮಹಿಳಾ ಉದ್ಯೋಗಿಗಳಿಗೆ ನೀಡಲಾಗ್ತಿರೋ ಋತುಚಕ್ರ
ರಜೆ ಆದೇಶದ ಬಳಿಕ ಸರ್ಕಾರದಿಂದ ಕಂಡೀಷನ್ಸ್ ಬಿಡುಗಡೆಯಾಗಿದೆ.
ಮಾಸಿಕ ವೇತನಸಹಿತ ಒಂದು ರಜೆ ನೀಡುವಂತೆ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದ ಬಳಿಕ ಸಾಕಷ್ಟು ಗೊಂದಲ ಇತ್ತು. ಇದೀಗ ಇಲಾಖೆಯಿಂದ ಹೊರಡಿಸಲಾಗಿರೋ ಸುತ್ತೋಲೆಯಲ್ಲಿ ಅನೇಕ ಗೊಂದಲ ಗಳು ನಿವಾರಣೆಯಾಗಿದೆ. ರಜೆ ನೀಡಬೇಕಾದ್ರೆ ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ.
ಕಂಡೀಷನ್ ಏನು..?
* ಪ್ರತಿ ಮಹಿಳಾ ಉದ್ಯೋಗಿಯೂ ನ ಆಯಾ ತಿಂಗಳ ಋತುಚಕ್ರ ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳಬೇಕು.
* ಹಿಂದಿನ ತಿಂಗಳ ಋತುಚಕ್ರ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶವಿರುವುದಿಲ್ಲ.
* ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ.
* 52 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಈ ರಜೆಯ ಸೌಲಭ್ಯ ಇಲ್ಲ
ಇನ್ನು, ಎಲ್ಲಾ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ತಿಂಗಳಲ್ಲಿ ಒಂದು ದಿನ ಋತುಚಕ್ರ ರಜೆ ನೀಡಬೇಕು. ತಿಂಗಳಲ್ಲಿ ಒಂದು ದಿನ ವರ್ಷಕ್ಕೆ 12 ದಿನ ವೇತನ ಸಹಿತ ರಜೆ ನೀಡುವಂತೆ ಸರ್ಕಾರ ಆದೇಶದಲ್ಲಿ ಉಲ್ಲೇಖವಾಗಿದೆ.
