ಮೈಸೂರು, ನವೆಂಬರ್ 8, 2025 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಜಿಲ್ಲಾಡಳಿತ ಮತ್ತು ಕನಕದಾಸ ಜಯಂತಿ ಆಚರಣೆ ಸಮಿತಿ ವತಿಯಿಂದ ಇಂದು ಅದ್ದೂರಿಯಾಗಿ ಆಚರಿಸಲಾಯಿತು.
ಕನಕದಾಸರ ಜಯಂತಿ ಆಚರಣೆಯ ಪ್ರಮುಖ ಭಾಗವಾಗಿ, ಬೆಳ್ಳಿ ರಥದಲ್ಲಿ ಕನಕದಾಸರ ಪ್ರತಿಮೆಯನ್ನು ಇರಿಸಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಶಾಸಕ ಜಿ ಟಿ ದೇವೇಗೌಡ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯುದ್ದಕ್ಕೂ ಅನೇಕ ವಿವಿಧ ಕಲಾ ತಂಡಗಳು ಮತ್ತು ಟ್ಯಾಬ್ಲೋಗಳು ಸಾಗಿ ಬಂದವು. ಇದು ನಗರದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ಈ ಸಂದರ್ಭದಲ್ಲಿ ಶಾಸಕ ಶ್ರೀವತ್ಸ, ಕೆ ಹರೀಶ್ ಗೌಡ, ಮಂಜೇಗೌಡ, ಮಾಜಿ ಶಾಸಕ ಎಂ ಕೆ ಸೋಮಶೇಖರ್, ಕೆ ಮರೀಗೌಡ, ಸುಬ್ರಹ್ಮಣ್ಯ ಸೇರಿದಂತೆ ಅನೇಕ ಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿ ಕನಕದಾಸರ ಪಾರಂಪರಿಕ ಮೌಲ್ಯಗಳನ್ನು ಸ್ಮರಿಸಿದರು.
