PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: “ಪ್ರತಿ ನಿತ್ಯ ಅನ್ನ ಕೊಡುವವರೇ ಅನ್ನದಾತರು, ವರ್ಷಕ್ಕೊಮ್ಮೆ ಕೊಡುವವರಲ್ಲ”: ನಟ ದರ್ಶನ್‌ಗೆ ನಿರ್ಮಾಪಕ ಉಮಾಪತಿ ಪರೋಕ್ಷ ಟಾಂಗ್!
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > “ಪ್ರತಿ ನಿತ್ಯ ಅನ್ನ ಕೊಡುವವರೇ ಅನ್ನದಾತರು, ವರ್ಷಕ್ಕೊಮ್ಮೆ ಕೊಡುವವರಲ್ಲ”: ನಟ ದರ್ಶನ್‌ಗೆ ನಿರ್ಮಾಪಕ ಉಮಾಪತಿ ಪರೋಕ್ಷ ಟಾಂಗ್!
ಮುಖಪುಟಮೈಸೂರು ನಗರಸಿನಿಮಾ

“ಪ್ರತಿ ನಿತ್ಯ ಅನ್ನ ಕೊಡುವವರೇ ಅನ್ನದಾತರು, ವರ್ಷಕ್ಕೊಮ್ಮೆ ಕೊಡುವವರಲ್ಲ”: ನಟ ದರ್ಶನ್‌ಗೆ ನಿರ್ಮಾಪಕ ಉಮಾಪತಿ ಪರೋಕ್ಷ ಟಾಂಗ್!

Prathinidhi News
Last updated: November 4, 2025 12:01 pm
Prathinidhi News
Published November 4, 2025
Share
SHARE

ಮೈಸೂರು, ನವೆಂಬರ್‌ 4, 2025 : ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮಾತನಾಡಿದ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು, ನಟ ದರ್ಶನ್ ಅವರ ಹೆಸರು ಹೇಳದೆ ತೀವ್ರ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸ್ಟಾರ್ ನಟರ ಹುಟ್ಟಿಗೆ ನಿರ್ಮಾಪಕರು ಮತ್ತು ನಿರ್ದೇಶಕರ ಪಾತ್ರ ಮಹತ್ವದ್ದು ಎಂಬುದನ್ನು ಅವರು ಪ್ರತಿಪಾದಿಸಿದರು.

ಒಬ್ಬರು ಇತ್ತೀಚೆಗೆ ಹೇಳಿದರು, ‘ನಿರ್ಮಾಪಕರು ಇದ್ದರೆ ಸ್ಟಾರ್ ಆಗಲ್ಲ, ಸಿನಿಮಾ ಆಗುತ್ತೆ’ ಅಂತಾ. ಆದರೆ, ಒಂದು ಸಿನಿಮಾಗೆ ದೊಡ್ಡ ಸ್ಟಾರ್ ಅಂದರೆ ಅದು ನಿರ್ಮಾಪಕರು ಹಾಗೂ ನಿರ್ದೇಶಕರು, ಎಂದು ಉಮಾಪತಿ ಅವರು ನೇರವಾಗಿ ದರ್ಶನ್ ಅವರ ಹೇಳಿಕೆಗೆ ತಿರುಗೇಟು ನೀಡಿದರು. ನಿರ್ಮಾಪಕರು, ನಿರ್ದೇಶಕರು ಹಾಗೂ ಜನರು ಸ್ಟಾರ್‌ಗಳನ್ನು ಮಾಡುತ್ತಾರೆ. ನಿರ್ಮಾಪಕರು, ನಿರ್ದೇಶಕರು ಸೇರಿದಾಗ ಮಾತ್ರ ಸ್ಟಾರ್‌ನ್ನು ಹುಟ್ಟುಹಾಕಬಹುದು, ಎಂದು ಸ್ಪಷ್ಟಪಡಿಸಿದರು.

ಸಿನಿಮಾ ಸ್ಟಾರ್ ಆದ ಮೇಲೆ, ಅವರಿಗೆ ಅನ್ನದಾತರು ಬೇಕಾದಷ್ಟು ಜನರು ಆಗಿಬಿಡುತ್ತಾರೆ. ಆಮೇಲೆ ನಿರ್ಮಾಪಕರನ್ನು ಬಿಟ್ಟು ಫ್ಯಾನ್ ಕ್ಲಬ್‌ಗಳನ್ನು ಕಟ್ಟಿಕೊಳ್ಳುತ್ತಾರೆ ಎಂದು ಟೀಕಿಸಿದರು. ಒಂದಷ್ಟು ಕ್ಯಾಂಪೇನ್‌ಗಳಿಗೆ ಕರೆದುಕೊಂಡು ಹೋಗಿ ಅನ್ನ ಹಾಕಿದರೆ, ಅವರನ್ನು ಅನ್ನದಾತರು ಅಂತಾರೆ. ಆದರೆ, ಪ್ರತಿ ನಿತ್ಯ ಅನ್ನ ಕೊಡುವವರು ಅನ್ನದಾತರು. ವರ್ಷಕ್ಕೆ ಒಂದು ಬಾರಿ ಅನ್ನ ಹಾಕುವವರು ಯಾವತ್ತೂ ಅನ್ನದಾತರು ಆಗಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ನುಡಿದರು.

- ಜಾಹೀರಾತು -

ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ. ಒಪ್ಪೊತ್ತಿನ ಕೂಳನ್ನು ನಂಬಿಕೊಂಡು ವರ್ಷದ ಕೂಳನ್ನು ಕಳೆದುಕೊಂಡ್ರು ಎಂಬ ನಿದರ್ಶನ ನಿಮ್ಮ‌ ಮುಂದೆ ಇದೆ ಎಂದರು.ನಾನು ಯಾರ ಬಳಿಯಾದರೂ ಸಹಾಯ ತೆಗೆದುಕೊಂಡರೆ ಹತ್ತು ಜನದ ಮುಂದೆ ಹೇಳುತ್ತೇನೆ. ಸಹಾಯ ಮಾಡಿದವರನ್ನು ಸಾಯುವವರೆಗೆ ನೆನಪು ಮಾಡಿಕೊಳ್ಳುತ್ತೇನೆ. ಕೃತಜ್ಞತೆಯನ್ನು ಮರೆತರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ ಎಂದು ಕೃತಜ್ಞತಾಭಾವದ ಮಹತ್ವವನ್ನು ಹೇಳಿದರು.

ಇಬ್ಬರು ಹೀರೋಗಳ ಜೊತೆ ಸಿನಿಮಾ

ಸದ್ಯದಲ್ಲೇ ಇಬ್ಬರು ಹೀರೋಗಳ ಜೊತೆ ಸಿನಿಮಾ ಮಾಡುತ್ತೇನೆ ಎಂದು ತಿಳಿಸಿದ ಉಮಾಪತಿ, ತಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ಯಾನ್ ಇಂಡಿಯಾ ಮಾಡಲು ಹೋದವರು ಜೇಬು ಖಾಲಿ ಮಾಡಿಕೊಂಡು ಬಂದಿದ್ದಾರೆ. ಎಷ್ಟೇ ಆದರೂ ಹಳೇ ಹೆಂಡತಿಯ ಪಾದವೇ ಗತಿ ಎಂಬಂತೆ ನಮಗೆ ಕರ್ನಾಟಕದ ಜನರೇ ಗಟ್ಟಿ, ಎಂದು ರಾಜ್ಯ ಪ್ರೇಕ್ಷಕರ ಮಹತ್ವವನ್ನು ತಿಳಿಸಿದರು.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ನಗರರಾಜಕೀಯ

ಕೆ.ಸಿ. ಲೇಔಟ್ ಕೆರೆ ಒತ್ತುವರಿ ತೆರವು: ಜಿಲ್ಲಾಡಳಿತದ ಕ್ರಮಕ್ಕೆ ಶಾಸಕ ಶ್ರೀವತ್ಸ ಮೆಚ್ಚುಗೆ, ಕ್ರಿಮಿನಲ್ ಮೊಕದ್ದಮೆಗೆ ಆಗ್ರಹ

February 16, 2026
ಮುಖಪುಟಮೈಸೂರು ನಗರರಾಜಕೀಯ

ಸ್ನೇಹಿತನ ಪುತ್ರನ ವಿವಾಹದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ ; ವಧು-ವರರಿಗೆ ಆಶೀರ್ವಾದ

November 3, 2025
ಮುಖಪುಟಮೈಸೂರು ನಗರರಾಜಕೀಯ

ಮೈಸೂರು ಫ್ಲೈ ಓವರ್ ವಿರೋಧಿಸಿ ಕಾನೂನಾತ್ಮಕ ಹೋರಾಟ : ಸಂಸದ ಯದುವೀರ್ ಎಚ್ಚರಿಕೆ

November 5, 2025
ನವದೆಹಲಿಮುಖಪುಟ

ಮಧ್ಯಪ್ರದೇಶದಲ್ಲೊಬ್ಬ ಕೋಟ್ಯಾಧಿಪತಿ ಭಿಕ್ಷುಕ! ಭಿಕ್ಷುಕನನ್ನು ರಕ್ಷಿಸಿದ ಅಧಿಕಾರಿಗಳಿಗೆ ಶಾಕ್‌ !

January 21, 2026
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?