ಯಳಂದೂರು: ಪಟ್ಟಣದ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜಿಗೆ ಈ ವರ್ಷ(2024) ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.80.68 ಫಲಿತಾಂಶ ಲಭ್ಯವಾಗಿದೆ.
ಒಟ್ಟು ಪರೀಕ್ಷೆಗೆ ಹಾಜರಾದವರು 176 ವಿದ್ಯಾರ್ಥಿಗಳು ಅದರಲ್ಲಿ 142 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ 19 ವಿದ್ಯಾರ್ಥಿಗಳು ಅತ್ಯಂತ ಶ್ರೇಣಿ 98 ಪ್ರಥಮ ದರ್ಜೆ 22 ದ್ವಿತೀಯ ದರ್ಜೆ ಹಾಗೂ 3 ಜನ ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇದರಲ್ಲಿ ವಿಜ್ಞಾನ ವಿಭಾಗದಲ್ಲಿ 58 ವಿದ್ಯಾರ್ಥಿಗಳು ಪರೀಕ್ಷೆ ಬರೆದು 50 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಒಟ್ಟು ಶೇ.86.2% ಫಲಿತಾಂಶ ಲಭ್ಯವಾಗಿದೆ. ವಾಣಿಜ್ಯ ವಿಭಾಗದಲ್ಲಿ 64 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 50 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟು 78.12 ಫಲಿತಾಂಶ ಲಭ್ಯವಾಗಿದೆ.
ಕಲಾ ವಿಭಾಗದಲ್ಲಿ 54 ವಿದ್ಯಾರ್ಥಿಗಳು ಪರೀಕ್ಷೆ ಬರೆದು 42 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಒಟ್ಟು ಶೇ. 77.77 ಫಲಿತಾಂಶ ಲಭ್ಯವಾಗಿದೆ ಎಂದು ಪ್ರಾಂಶುಪಾಲರಾದ ಚಂದ್ರಶೇಖರ್ ತಿಳಿಸಿದರು.
ಅರುಣ. ಎನ್ 563/600(93.83%) ವಿಜ್ಞಾನ ವಿಭಾಗ
ಐಶ್ವರ್ಯ. ಹೆಚ್ 545/600(90.83%) ವಾಣಿಜ್ಯ ವಿಭಾಗ
ಸುಮ
562/600(93.66%)
ಕಲಾ ವಿಭಾಗ