ಮೈಸೂರು, ಅಕ್ಟೋಬರ್ 02: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ರಾಜವಂಶಸ್ಥರನ್ನು ಜಿಲ್ಲಾಡಳಿತ ಸಾಂಪ್ರದಾಯಿಕವಾಗಿ ಆಹ್ವಾನಿಸಿದೆ. ಪ್ರಮೋದಾದೇವಿ ಒಡೆಯರ್ ಅವರಿಗೆ ದಸರಾ ಆಹ್ವಾನ ಪತ್ರಿಕೆ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯರಿಂದ ಆಹ್ವಾನಿಸಿದ್ದಾರೆ. ದಸರಾ ಮಹೋತ್ಸವಕ್ಕೆ ಸಹಕಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದು, ಈ ವೇಳೆ ಶಾಸಕ ಶ್ರೀವತ್ಸ, ಡಿಸಿ ಲಕ್ಷ್ಮಿಕಾಂತ್ ರೆಡ್ಡಿ, ಎಡಿಸಿ ಐಶ್ವರ್ಯಾ, ಜಿ.ಪಂ. ಸಿಇಒ ಯುಕೇಶ್ ಕುಮಾರ್, ಕಮಿಷನರ್ ಸೀಮಾ ಲಾಟ್ಕರ್ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್ ಉಪಸ್ಥಿತರಿದ್ದರು. ಸಂಪ್ರದಾಯದಂತೆ ಪ್ರಮೋದಾದೇವಿ ಒಡೆಯರ್ಗೆ ಆಹ್ವಾನ ಕೊಟ್ಟಿದ್ದೇವೆ. ಅವರು ಕೂಡ ಬಹಳ ಸಂತೋಷದಿಂದ ಆಹ್ವಾನ ಸ್ವೀಕರಿಸಿದರು. ದಸರಾ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ಕೊಡೋದಾಗಿ ಹೇಳಿದ್ದಾರೆ ಎಂದು ಸಚಿವ ಯತೀಂದ್ರ ತಿಳಿಸಿದ್ದಾರೆ.
