ಮಂಡ್ಯ : ಲೇಡಿ PSIಗೆ ಕಪಾಳಮೋಕ್ಷ ಪ್ರಕರಣ ಸಂಬಂಧ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯಾ ಗೌಡ ವಿಡಿಯೋ ಮೂಲಕ ಪಿಎಸ್ಐ ಸವಿತಾ ಪಾಟೀಲ್ ಬಳಿ ಕ್ಷಮೆ ಕೋರಿದ್ದಾರೆ. ಆಗಸ್ಟ್ 12ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ದೇವರ ದರ್ಶನಕ್ಕೆ ಮಕ್ಕಳೊಂದಿಗೆ ಐಶ್ವರ್ಯಾ ಗೌಡ ತೆರಳಿದ್ದರು. ಈ ವೇಳೆ ಗರ್ಭಗುಡಿಗೆ ಬಿಡುವ ವಿಚಾರವಾಗಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್ಐ ಜತೆ ಐಶ್ವರ್ಯಾ ವಾಗ್ವಾದ ನಡೆಸಿದ್ದರು. ಆ ಬಳಿಕ ಪಿಎಸ್ಐಗೆ ಕಪಾಳಮೋಕ್ಷ ಮಾಡಿದ್ದರು. ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪಿಎಸ್ಐ ಸವಿತಾ ಬಳಿ ಕ್ಷಮೆ ಕೋರಲು ಕೋರ್ಟ್ ತಾಕೀತು ಹಿನ್ನೆಲೆ ಐಶ್ವರ್ಯಾ ಈಗ ಕ್ಷಮೆಯಾಚಿಸಿದ್ದಾರೆ
