ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರೆಂಟಿಗಳನ್ನು ಘೋಷಿಸಿತ್ತು. ಅದರಲ್ಲಿ ಬಹು ಮುಖ್ಯ ಗ್ಯಾರೆಂಟಿ ಅನ್ನ ಭಾಗ್ಯ(Anna Bhagya). ಇಂದಿನಿ ಸಿಎಂ ಸಿದ್ದರಾಮಯ್ಯ (Siddaramaiah) ಎಲೆಕ್ಷನ್ ಪ್ರಚಾರದಲ್ಲಿ ಹತ್ತು ಕೆ.ಜಿ ಅಕ್ಕಿ ಬೇಕಾ ಹಾಗಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಚುನಾವಣಾ ಪ್ರಚಾರದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ರು. ಆದರೆ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದ್ರು ಐದು ಕೆಜಿ ಅಕ್ಕಿ ನೀಡದೆ ಬದಲಿಗೆ ಹಣ ನೀಡುತ್ತಿದ್ದು ಇದೀಗ ಗೃಹಿಣಿಯರು ನಮಗೆ ಹಣ ಬೇಡ ಅಕ್ಕಿ ಬೇಕು ಎಂದು ಮನವಿ ಮಾಡ್ತಿದ್ದಾರೆ.
ರಾಜ್ಯದ ಜನರಿಗೆ ಅಕ್ಕಿ ಬದಲು ಹಣ ನೀಡ್ತಿರುವ ರಾಜ್ಯ ಸರ್ಕಾರಕ್ಕೆ ಜನರು ಹಣ ಬೇಡ ಅಕ್ಕಿ ನೀಡಿ ಎಂದು ಮನವಿ ಮಾಡಿದ್ದಾರೆ. ನಮಗೆ ಹಣ ಬೇಡ ಅಕ್ಕಿಯೇ ಕೊಡಿ ಎಂದು ರಾಜ್ಯದ ಜನತೆ ಅಭಿಮತದಿಂದ ಮನವಿ ಮಾಡಿದೆ. ಈ ಬಗ್ಗೆ ಒಂದಲ್ಲ ಎರಡು ಸರ್ವೆಗಳು ನಡೆದಿದ್ದು ಅಕ್ಕಿಗೆ ಡಿಮ್ಯಾಂಡ್ ಹೆಚ್ಚಿದೆ. ಆಹಾರ ಇಲಾಖೆಯ ಅಧಿಕಾರಿ, ಸಿಬ್ಬಂದಿಯಿಂದ ಒಂದು ಸರ್ವೆ. ಸಿಎಂ ಕಚೇರಿಯ ಮೂಲಕ ಎನ್ ಜಿ ಒ ಮೂಲಕ ಮತ್ತೊಂದು ಸರ್ವೆ ನಡೆಸಲಾಗಿತ್ತು. ಈ ಎರಡು ಸರ್ವೆಯಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮಂದಿ ಹಣ ಬೇಡ ಅಕ್ಕಿ ಕೊಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ದೊರೆಯುತ್ತಿಲ್ಲ. ಇದೇ ಕಾರಣಕ್ಕೆ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ. ಮತ್ತೂಂದೆಡೆ ಮಳೆ ಕೊರತೆಯಿಂದ ಭತ್ತದ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ತಾನೇ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ವರದಿಯನ್ನು ಬಿಡುಗಡೆಗೊಳಿಸಿಲ್ಲ. ಈ ಬಗ್ಗೆ ಮಹಿಳೆಯರು ನಮಗೆ ಹಣ ಬೇಡ ದಯವಿಟ್ಟು ಸರ್ಕಾರ ಅಕ್ಕಿ ಕೊಡಲಿ ಎಂದು ಮನವಿ ಮಾಡುತ್ತಿದ್ದಾರೆ.
