ಹುಲ್ಲಹಳ್ಳಿ : ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಪರವಾಗಿ ಮತಯಾಚಿಸಲು ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಹುಲ್ಲಹಳ್ಳಿಯಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಬಿಜೆಪಿ ಗ್ರಾಮಂತರ ಅಧ್ಯಕ್ಷ ಕೆಂಡಗಣಪ್ಪ, ಕಣೆನೂರು ಶಿವಮೂರ್ತಿ, ಗ್ರಾಪಂ ಸದಸ್ಯರಾದ ಶಿವಣ್ಣ, ಮಲ್ಲಿಕಾರ್ಜುನ, ಹರದನಹಳ್ಳಿ ಬಸಪ್ಪ, ಯಾಲಹಳ್ಳಿ ಗುರು, ಕಣೆನೂರು ಗಂಗಾಧರ್, ಮಾಜಿ ಅಧ್ಯಕ್ಷ ಮಹೇಶ್, ಕೆ. ವರದರಾಜು, ಚಂದ್ರವಾಡಿ ಮಹದೇವಸ್ವಾಮಿ, ತಾಲೂಕು ರೈತ ಸಂಘದ ಅಧ್ಯಕ್ಷ ಮಾದನಹಳ್ಳಿ ಮೂರ್ತಿ, ರವೀಂದ್ರ ಚಂದ್ರವಾಡಿ, ಪರಮೇಶ್, ತರಗನಳ್ಳಿ ಬಸವರಾಜು, ಹುಲ್ಲಳ್ಳಿ ಅಶೋಕ್, ಮೋಹನ್, ಕೇಬಲ್, ಮಹೇಶ್, ಶಿರಮಳ್ಳಿ, ಶಂಬಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

