ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಗುಂಡಲ್ ಜಲಾಶಯದಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಪುದೂರು ಗ್ರಾಮದ ಮೀನಾ(33), ಪವಿತ್ರಾ(13), ಕೀರ್ತಿ(12) ಮೃತರು. ಗುಂಡಲ್ ಜಲಾಶಯದಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲುಜಾರಿ ಬಿದ್ದ ತಾಯಿ ರಕ್ಷಿಸಲು ಹೋಗಿ ಇಬ್ಬರು ಮಕ್ಕಳು ಸಹ ಸಾವನ್ನಪ್ಪಿದ್ದಾರೆ. ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
