ಪುನೀತ್ ರಾಜ್ ಕುಮಾರ್ ಅವರು ನಮ್ಮನೆಲ್ಲ ಅಗಲಿ ಇಂದಿಗೆ 2 ವರ್ಷ. ಪುಣ್ಯಸ್ಮರಣೆಗೆ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪುನೀತ್ ರಾಜ್ ಕುಮಾರ್ ಸ್ಮಾರಕವನ್ನು ಬಿಳಿ ಮಾರ್ಬಲ್ಸ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಪುನೀತ್ ರಾಜ್ಕುಮಾರ್ ಸಮಾಧಿಗೆ ರಾಜ್ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ, ಮಕ್ಕಳಿಂದ ಪುನೀತ್ ಸಮಾಧಿಗೆ ನಮನ. ರಾಘವೇಂದ್ರ ರಾಜ್ಕುಮಾರ್, ಪುತ್ರ ಯುವರಾಜ್ಕುಮಾರ್, ಅಕ್ಕ ಪೂರ್ಣಿಮಾ, ಮಗಳು ಧನ್ಯಾ ರಾಮ್ಕುಮಾರ್ರಿಂದ ನಮನ ಸಲ್ಲಿಸಲಾಯಿತು. ಪುನೀತ್ಗೆ ಇಷ್ಟವಾಗಿದ್ದ ಆಹಾರ ಪದಾರ್ಥ ಇಟ್ಟು ಸಮಾಧಿಗೆ ಪೂಜೆ ಸಲ್ಲಿಸಲಾಯಿತು.
