ಸ್ಥಳೀಯ ಕ್ರಿಸ್ಟೀಸ್ ಸಂಸ್ಥೆ ನಡೆಸಿದ ಹರಾಜಿನಲ್ಲಿ ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್ಗೆ ಸೇರಿದ್ದ ರತ್ನಗಳು ಮತ್ತು ಸುಂದರವಾದ ಖಡ್ಗವೊಂದು 1 ಕೋಟಿ ರು.ಗೆ ಮಾರಾಟವಾಗಿದೆ.ಈ ಎರಡೂ ವಸ್ತುಗಳನ್ನು ಖರೀದಿ ಮಾಡಿದವರ ಹೆಸರನ್ನು ಹರಾಜು ಪ್ರಕ್ರಿಯೆ ನಡೆಸಿದ ಕ್ರಿಸ್ಟೀಸ್ ಸಂಸ್ಥೆ ಬಹಿರಂಗಪಡಿಸಿಲ್ಲ.
ಆಂಗ್ಲೋ- ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನಿಗೆ ಸೋಲಾದ ಬಳಿಕ ಈ ವಸ್ತುಗಳು ಭಾರತವನ್ನು ಆಳುತ್ತಿದ್ದ ಬ್ರಿಟಿಷರ ಪಾಲಾಗಿದ್ದವು. ಬಳಿಕ ಇವು ಕ್ರಿಸ್ಟೀನ್ ಹರಾಜು ಸಂಸ್ಥೆಯ ಪಾಲಾಗಿದ್ದವು.