ನಂಜನಗೂಡು, ಫೆಬ್ರವರಿ 17, 2026: ಮೈಸೂರು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ವ್ಯಾಪಕ ಹಾನಿ ಉಂಟುಮಾಡಿವೆ.

ಕಾಡಂಚಿನ ಗ್ರಾಮವಾಗಿರುವ ದೇವರಾಯಶೆಟ್ಟಿಪುರದಲ್ಲಿ ಆಹಾರ ಹುಡುಕಿಕೊಂಡು ಬಂದ ಆನೆಗಳ ಹಿಂಡು, ಗ್ರಾಮದ ಹೆಚ್.ಜಿ. ಮಹದೇವಸ್ವಾಮಿ ಎಂಬುವವರಿಗೆ ಸೇರಿದ ಗುಡಿಸಲು ಹಾಗೂ ರಕ್ಷಣೆಗಾಗಿ ಅಳವಡಿಸಲಾಗಿದ್ದ ಸೋಲಾರ್ ತಂತಿ ಬೇಲಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ.
ದಾಳಿಯ ಸಮಯದಲ್ಲಿ ಗುಡಿಸಲಿನಲ್ಲಿದ್ದ ಜಾನುವಾರುಗಳು ಯಾವುದೇ ತೊಂದರೆಯಿಲ್ಲದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿವೆ. ಪದೇ ಪದೇ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿರುವುದರಿಂದ ಗ್ರಾಮಸ್ಥರು ತೀವ್ರ ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹಾನಿಯಾಗಿರುವ ಗುಡಿಸಲು ಮತ್ತು ಸೋಲಾರ್ ಬೇಲಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
