ಪ್ರತಿನಿಧಿ ವರದಿ ತಿ. ನರಸೀಪುರ
2023-24ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತಾಲೂಕು ಶೇ 93.29ರಷ್ಟು ಫಲಿತಾಂಶ ಪಡೆದು ಕಳೆದ ಬಾರಿಗಿಂತ ಶೇ.6ರಷ್ಟು ಹೆಚ್ಚುವರಿ ಫಲಿತಾಂಶವನ್ನು ದಾಖಲಿಸಿದೆ.
ಒಟ್ಟು 3626 ವಿದ್ಯಾರ್ಥಿಗಳ ಪೈಕಿ 3383 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 243 ವಿದ್ಯಾರ್ಥಿಗಳು ನಪಾಸಾಗಿದ್ದಾರೆ. ಇದರೊಂದಿಗೆ ಕಳೆದ ಸಾಲಿಗಿಂತ ಶೇಕಡ 6ರಷ್ಟು ಹೆಚ್ಚುವರಿ ಫಲಿತಾಂಶ ಪಡೆಯುವ ಮುಖೇನ ಜಿಲ್ಲೆಯಲ್ಲಿಯೇ ತಿ.ನರಸೀಪುರ ತಾಲೂಕು ಪ್ರಥಮ ಸ್ಥಾನ ಗಳಿಸಿದೆ.
ಈ ಸಾಲಿನಲ್ಲಿ ಪರೀಕ್ಷೆ ಬರೆದ 1779 ಬಾಲಕರ ಪೈಕಿ 1605 ,1847 ವಿದ್ಯಾರ್ಥಿನಿಯರ ಪೈಕಿ 1778 ಬಾಲಕಿಯರು ಪಾಸಾಗಿದ್ದು, ಬಾಲಕರು 99.22% ಮತ್ತು ಬಾಲಕಿಯರು ಶೇ 96.32%ರಷ್ಟು ಫಲಿತಾಂಶ ಗಳಿಸಿದ್ದಾರೆ. ಬನ್ನೂರಿನ ವಿವೇಕಾನಂದ ಶಾಲೆಯ ಶಿವಕುಮಾರ್ ಎಂಬ ವಿದ್ಯಾರ್ಥಿ 618 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನಪಡೆದಿದ್ದಾರೆ ಎಂದು ಬಿಇಒ ಜಿ.ಶೋಭಾ ತಿಳಿಸಿದ್ದಾರೆ.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು:
ವಿವೇಕಾನಂದ ಶಾಲೆಯ ಶಿವಕುಮಾರ್ 618, ಕೆ. ಎಸ್. ಪೂರ್ವಿಕ, ಆರ್. ಸುಹಾಸ್ 606, ಪಿ. ವಿ. ಶಿಲ್ಪಶ್ರೀ ಮತ್ತು ವಿ ವರ್ಷಿಣಿ 604 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
