ಗುಂಡ್ಲುಪೇಟೆ: ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಗೆದ್ದರೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಾಯಕವಾಗಲಿದೆ ಎಂದು ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು.
ತಾಲೂಕಿನ ಆಲತ್ತೂರು, ಬರಗಿ ಗ್ರಾಮ ಪಂಚಾಯಿತಿಯ ಕೇಂದ್ರಗಳಲ್ಲಿ ನಡೆದ ಲೋಕಸಭಾ ಚುನಾವಣಾ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಎಲ್ಲ ಯೋಜನೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ. ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ನೂರು ಕೋಟಿ ಅನುದಾನ ರಾಜ್ಯ ಸರ್ಕಾರದಿಂದ ಕೊಡುವುದರ ಮೂಲಕ ಈಗಾಗಲೇ ಹಲವು ಕಾಮಗಾರಿಗಳು ನಡೆಯುತ್ತಿದೆ. ಹಿಂದಿನ ಸರ್ಕಾರದಲ್ಲಿ ಹಿಂದೆ ಇದ್ದವರು ಕೆರೆಗೆ ನೀರು ತುಂಬಿಸುವ ಯೋಜನೆಗಳಲ್ಲಿ ನೀರು ಬಿಡುವ ಒಪ್ಪಂದ ನಡೆದಿದೆ ಹಾಗಾಗಿ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ತುಂಬಿಸುವಲ್ಲಿ ವಿಳಂಬವಾಗುತ್ತಿದ್ದು ದಾಖಲೆ ಸಮೇತ ನಿರೂಪಿಸಲು ಚರ್ಚೆಗೆ ಸಿದ್ಧನಿದ್ದೇನೆಂದರು.
ಕಾಡ ಮಾಜಿ ಅಧ್ಯಕ್ಷ ಎಚ್ಎಸ್ ನಂಜಪ್ಪ ಮಾತನಾಡಿ, ಧ್ರುವನಾರಾಯಣ್ ರವರನ್ನು ಬೆಂಬಲಿಸಿದಂತೆ ಸುನಿಲ್ ಬೋಸ್ ರವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು .
ಆಲತ್ತೂರು ಜಯರಾಂ, ಹಾಪ್ ಕಾಮ್ಸ್ ಅಧ್ಯಕ್ಷ ಎ.ಬಿ.ಬೋರೆಗೌಡ, ಮುಖಂಡರಾದ ಲೋಕೇಶ್, ಶ್ರೀನಿವಾಸ್, ರಾಮಣ್ಣ, ನಾಗರಾಜು, ಸೋಮಶೇಖರ್, ಆಲತ್ತೂರು, ಮಂಚಹಳ್ಳಿ, ಶೆಟ್ಟಹಳ್ಳಿ, ಸಾವುಕನಹಳ್ಳಿ, ಸಿದ್ದಯ್ಯನಪುರ ಗ್ರಾಮದ ಮುಖಂಡರು ಹಾಜರಿದ್ದರು.
ಫೋಟೋ ಇದೆ

