ಸೂಡಾನ್ ದೇಶದಲ್ಲಿ ಅನಾರೋಗ್ಯದಿಂದ ಮೃತರಾಗಿದ್ದ ಪಕ್ಷಿರಾಜ ಪುರದ ವ್ಯಾಪಾರಿ
ಪ್ರತಿನಿಧಿ ವರದಿ ಹನಗೋಡು
ಈಶಾನ್ಯ ಆಪ್ರೀಕಾದ ಸೂಡಾನ್ ದೇಶಕ್ಕೆ ವ್ಯಾಪಾರಕ್ಕಾಗಿ ತೆರಳಿ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ ಅಲೆಮಾರಿ (ಹಕ್ಕಿಪಿಕ್ಕಿ) ಜನಾಂಗದ ನಂದಿನಿ ಅವರ ಪಾರ್ಥಿವ ಶರೀರ ಭಾನುವಾರ ಸ್ವಗ್ರಾಮ ಪಕ್ಷಿರಾಜಪುರಕ್ಕೆ ಭಾನುವಾರ ಸಂಜೆ ತಲುಪಿತು.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಪಕ್ಷಿರಾಜಪುರ 2ನೇ ಕಾಲೋನಿಯ
ಅಲೆಮಾರಿ ಜನಾಂಗದ (ಹಕ್ಕಿಪಿಕ್ಕಿ) ನಂದಿನಿ ಕಳೆದೆರಡು ವರ್ಷಗಳ ಹಿಂದೆ ಉದ್ಯೋಗ ಆರಸಿ ತಮ್ಮ ಪತಿಯೊಂದಿಗೆ ಸೂಡಾನ್ ದೇಶಕ್ಕೆ ತೆರಳಿದ್ದು ಏ.14ರಂದು ಅನಾರೋಗ್ಯದಿಂದ ಸೂಡಾನ್ ದೇಶದ ಆಸ್ಪತ್ರೆಯೊಂದರಲ್ಲಿ ಮೃತರಾದರು.
ಮೃತರ ಪಾರ್ಥಿವ ಶರೀರವನ್ನು ತಮ್ಮ ತಾಯ್ನಾಡಿಗೆ ತರಲು ಪಕ್ಷಿರಾಜ ಪುರದ ನಿವಾಸಿಗಳು ಏ.14 ರಂದು ಹುಣಸೂರಿನ ಮಾಜಿ ಶಾಸಕ ಎಚ್. ಪಿ. ಮಂಜುನಾಥ್ ಅವರನ್ನು ಭೇಟಿ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಮನವಿ ಮಾಡಿದಕೊಂಡ ಮೇರೆಗೆ, ಎಚ್. ಪಿ. ಮಂಜುನಾಥ್ ಅವರು ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ರಜನೀಶ್ ಗೋಯಲ್ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ
ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಸೂಡಾನ್ ದೇಶದಲ್ಲಿರುವ ಭಾರತದ ರಾಯಬಾರಿ ಕಚೇರಿ ಅಧಿಕಾರಿ ಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಮೃತೆ ನಂದಿನಿ ಅವರ ಶವ ತರಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದರು.
ನಂದಿನಿಯವರ ಮೃತದೇಹವು ಸೂಡಾನ್ ದೇಶದಿಂದ ವಿಮಾನದ ಮೂಲಕ ಶನಿವಾರ ಬೆಳಿಗ್ಗೆ ಮುಂಬೈಗೆ ತಲುಪಿದ್ದು, ಅಲ್ಲಿಂದ ಅಂಬುಲೆನ್ಸ್ ಮೂಲಕ ಭಾನುವಾರ ಮಧ್ಯಾಹ್ನ ವೇಳೆಗೆ ಪಕ್ಷಿರಾಜಪುರಕ್ಕೆ ತಲುಪಿದೆ.
ಸಂಜೆ ಮೃತರ ಅಂತ್ಯಕ್ರೀಯೆ ನೇರವೇರಿತು. ಈ ವೇಳೆ ಮೈಸೂರು ಜಿಲ್ಲಾ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಲ್ಲೇಶ್ ಹಾಗೂ ತಾಲೂಕು ಅಧಿಕಾರಿಗಳು ಇದ್ದರು.

