ಪ್ರತಿನಿಧಿ ವರದಿ ಚಾಮರಾಜನಗರ
ಜಿಲ್ಲೆಯ ಯಳಂದೂರು ತಾಲೂಕಿನ ವಸತಿ ಖಾಸಗಿ ಫ್ರೌಡಶಾಲೆಯಲ್ಲಿ ಗಿರಿಜನ ವಿದ್ಯಾರ್ಥಿಯೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ.
ಶಾಲೆಯ ಶಿಕ್ಷಕ ಅರುಣ್‍ಕುಮಾರ್ ಬಂಧಿತ. 17 ವರ್ಷದ ಬಾಲಕ ಎಸ್‍ಎಸ್‍ಎಲ್‍ಸಿ ಓದುತ್ತಿದ್ದು ಏ.5 ರಂದು ಶಿಕ್ಷಕ ಬಾಲಕನನ್ನು ತನ್ನ ಕೊಠಡಿಗೆ ಕರೆಸಿಕೊಂಡು ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಹೇಳಲಾಗುತ್ತಿದೆ.
ಹಿಂದೆಯೇ ಈ ವಿಚಾರ ಬಯಲಿಗೆ ಬಂದಿತ್ತಾದರೂ ಮಾತುಕತೆ ಮೂಲಕ ಸಂಧಾನ ಮಾಡಲಾಗಿತ್ತು. ಆದರೆ ಶಿಕ್ಷಕ ಅದೇ ಚಾಳಿ ಮುಂದುವರಿಸಿದ್ದರಿಂದ ನೊಂದ ಬಾಲಕ ಮೈಸೂರಿನ ಒಡನಾಡಿ ಸಂಸ್ಥೆಗೆ ಏ.12 ರಂದು ದೂರು ನೀಡಿದ್ದನು.
ಸಂಸ್ಥೆಯ ನಿರ್ದೇಶಕ ಪರಶುರಾಮ್ ಏ.12 ರಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ದೂರು ನೀಡಿದ ಹಿನ್ನೆಲೆ ಶಿಕ್ಷಕನ ವಿರುದ್ಧ ಫೋಕ್ಸೋ ಕಾಯಿದೆಯಡಿ ದೂರು ದಾಖಲಾಗಿದೆ. ಶಿಕ್ಷಕನನ್ನು ಬಂಧಿಸಿ, ನ್ಯಾಯಾಂಗದ ವಶಕ್ಕೆ ನೀಡಲಾಗಿದ್ದು ಸಂತ್ರಸ್ತ ಬಾಲಕ ಬಾಲ ಮಂದಿರದ ಆಶ್ರಯದಲ್ಲಿದ್ದಾನೆ.
14ಸಿಎಚ್ಎನ್.2:
