– ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ
– ಕೆಆರ್‌ಎಸ್, ಎಸ್‌ಯುಸಿಐಸಿ ಅಭ್ಯರ್ಥಿಗಳ ಸ್ಪರ್ಧೆ
ಪ್ರತಿನಿಧಿ ವರದಿ ಮೈಸೂರು
ಮೈಸೂರು- ಕೊಡಗು ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ದಿನವಾದ ಗುರುವಾರದಂದು ಪ್ರಮುಖ ಸಂಘಟನೆಗಳ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಟಿ.ಆರ್. ಸುನೀಲ್ ಅವರು ಅಭ್ಯರ್ಥಿಯಾಗಿ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರೆ. ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಅಭ್ಯರ್ಥಿಯಾಗಿ ಎಂ.ಎಸ್. ಪ್ರವೀಣ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಎಸ್‌ಯುಸಿಐಸಿ ಅಭ್ಯರ್ಥಿಯಾಗಿರುವ ಸುನೀಲ್ ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡಿದ್ದು, ಯಾವುದೇ ಸ್ತಿರಾಸ್ತಿ ಹಾಗೂ ಚರಾಸ್ತಿ ಹೊಂದಿಲ್ಲ. ಕೈಯಲ್ಲಿರುವುದು ಹಾಗೂ ಬ್ಯಾಂಕ್ ಖಾತೆಯಲ್ಲಿ ಒಟ್ಟು 32 ರೂ. ನಗದು ಹೊಂದಿದ್ದಾರೆ. ಪತ್ನಿ ಪುಷ್ಪ ಅವರ ಬ್ಯಾಂಕ್ ಖಾತೆಯಲ್ಲಿನ ಹಣ ಹಾಗೂ ಚಿನ್ನಾಭರಣ ಸೇರಿ ಒಟ್ಟು ೨೦೩೨೦ ರೂ. ನಗ ನಾಣ್ಯ ಹೊಂದಿದ್ದಾರೆ. ಎಂಎ ಪದವೀಧರನಾಗಿರುವ ಸುನೀಲ್ ಮೇಲೆ ಯಾವುದೇ ರೀತಿಯ ಅಪರಾಧ ಪ್ರಕರಣಗಳಿಲ್ಲ.
=====================

