ರಾಮನಗರ : ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮಂಜುನಾಥ್ ಹೆಸರಿನ ನಾಲ್ವರು ಸೇರಿದಂತೆ ಒಟ್ಟು 13 ಮಂದಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ಬಹುಜನ್ ಭಾರತ ಪಾರ್ಟಿ ಅಭ್ಯರ್ಥಿಯಾಗಿ ಸಿ.ಎನ್ .ಮಂಜುನಾಥ, ಪಕ್ಷೇತರರಾಗಿ ಸಿ.ಮಂಜುನಾಥ್ , ಎನ್ .ಮಂಜುನಾಥ್ , ಕೆ.ಮಂಜುನಾಥ್ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕರುನಾಡ ಪಾರ್ಟಿ ಅಭ್ಯರ್ಥಿಯಾಗಿ ಎಸ್ .ಸುರೇಶ್ , ಅಖಿಲ ಭಾರತ್ ಹಿಂದು ಮಹಾಸಭಾ ಅಭ್ಯರ್ಥಿಯಾಗಿ ಎಚ್ .ರಾಜಣ್ಣ, ನವ ಭಾರತ್ ಸೇನಾದಿಂದ ಎನ್ .ವಸಂತ್ ರಾವ್ ಜಗತಾಪ್ , ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಎಲ್ .ಕುಮಾರ್ , ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಕೆ.ಎನ್ . ಮನಮೋಹನ್ ರಾಜ್ , ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ಮಹಮದ್ ಮುಸದಿಕ್ ಪಾಷ, ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿಯಾಗಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ, ಕಂಟ್ರಿ ಸಿಟಿಜನ್ ಪಾರ್ಟಿಯಿಂದ ಜೆ.ವಸಿಷ್ಠ , ಪಕ್ಷೇತರರಾಗಿ ಟಿ.ರಾಜೇಂದ್ರ ನಾಮಪತ್ರ ಸಲ್ಲಿಸಿದ್ದಾರೆ.
ಮಂಜುನಾಥ್ ಹೆಸರಿನ ನಾಲ್ವರಿಂದ ಉಮೇದುವಾರಿಕೆ ಸಲ್ಲಿಕೆ
Leave a Comment
