
ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ
ಪ್ರತಿನಿಧಿ ವರದಿ ದೇವನಹಳ್ಳಿ
ರವಿ ಕಾಣದ್ದನ್ನಾ ಕವಿ ಕಂಡ ಎಂಬ ಗಾದೆ ಮಾತಿನಂತೆ ಕೋಲಾರ ಲೋಕಸಭಾ ಕ್ಷೇತ್ರದ ಬಿಕ್ಕಟ್ಟಿನ ಹಿಂದೆ ಯಾರಿದ್ದಾರೆ ಎಂಬುದನ್ನು ಮಾಧ್ಯಮದವರೇ ಹುಡಕಬೇಕು ಇಂತಹ ರಾಜಕೀಯ ಬೆಳವಣಿಗೆಗಳಿಂದ ಮನಸ್ಸಿಗೆ ಅಘಾತವಾಗಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, ನಾನು ಕೇಂದ್ರದಲ್ಲಿ 40 ವರ್ಷಗಳ ಕಾಲ ರಾಜಕೀಯ ಮಾಡಿರುವವನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ನನಗೆ ತವರು ಮನೆ ಇದ್ದಂತೆ. ನಾನು ಮಾತು ಕೊಟ್ಟಿದ್ದೇನೆ ಎರಡು ಕ್ಷೇತ್ರದಲ್ಲಿ ನಾನು ಅಭ್ಯರ್ಥಿಗಳನ್ನು ಗೆಲ್ಲಿಸಿಕೋಂಡು ಬರುತ್ತೇನೆ ಎಂದಿದ್ದೇನೆ ಆದರೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ.
ಪ್ರಸ್ತುತ ಬೆಳವಣಿಗೆಗಳಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ನಮಗೆ ದೊಡ್ಡದು ನನಗೆ ಎಲ್ಲ ಅಧಿಕಾರವನ್ನು ಕಲ್ಪಿಸಿದ್ದು, ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಕೋಲಾರ ಲೊಕಸಭೆಯಲ್ಲಿ ಈ ಬಾರಿ ನಾವು ಜಯಗಳಿಸ ಬೇಕಾಗಿರುವುದರಿಂದ ನಮ್ಮ ಕುಟುಂಬದ ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ಕೇಳಿದ್ದು ಹೈಕಮಾಂಡ್ ನೀಡುವ ಆಶಾಭಾವನೆ ಹೊಂದಿದ್ದೇನೆ ಎಂದರು.
ಕೋಲಾರದ ಬಿಕ್ಕಟ್ಟು ನಿವಾರಿಸುವಲ್ಲಿ ಎಐಸಿಸಿ ಅಧ್ಯಕ್ಷರಾದಿಯಾಗಿ ನನಗೆ ಸಮ್ಮತಿ ಸೂಚಿಸಿದ್ದು, ಮುಖ್ಯಮಂತ್ರಿ ಯವರ ನಿರ್ಧಾರ ರಿಸಲ್ಟ್ ಓರಿಯಂಟೇಡ್ ಅಲ್ಲಾ…. ಇಗಲೂ ಕಾಲ ಮಿಂಚಿಲ್ಲ ನಮಗೆ ಟಿಕೆಟ್ ನೀಡಿದರೆ ನಾವೆಲ್ಲ ಗೆಲ್ಲಿಸಿ ಕೊಂಡು ಬರುತ್ತೇವೆ. ಶ್ರೀನಿವಾಸ ಪುರದ ಮಾಜಿ ಸಚಿವ ರಮೇಶ್ ಕುಮಾರ್ ಅವರ ಮನೆಗೆ ನಾನೇ ಖುದ್ದಾಗಿ ಬೇಟಿ ನೀಡಿದ್ದು, ಅವರು ಅನಾರೋಗ್ಯದ ಕಾರಣ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲಾ .
ರಮೇಶ ಕುಮಾರ್ ಅವರನ್ನು ಕೇಳಿ ನಿರ್ಧಾರ ಮಾಡಲಿ. ಅವರಿಗೂ ಬೇಡ ಇವರಿಗೂ ಬೇಡ ಎಂದರೆ ಅಭ್ಯರ್ಥಿಯ ಗೆಲವು ಕಷ್ಟಕರವಾಗಲಿದೆ. ನಾನು ಯಾವ ನಾಯಕರ ವಿರುದ್ಧವೂ ಕೆಲಸ ಮಾಡಿಲ್ಲ. ಸಚಿವ ಗಿರಿಗೆ ವಿರೋಧಿಸಿಲ್ಲ. ಶಾಸಕರಾಗಲು ಸಹಕರಿಸಿದ್ದೇನೆ.
ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದ್ದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಕೋಲಾರ ಲೋಕಸಭಾ ಕ್ಷೇತ್ರ ಗೆಲ್ಲಿಸಿ ಕೊಂಡುಬರುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮನಸ್ಸು ಮಾಡಿದರೆ ಉತ್ತಮ ಫಲಿತಾಂಶ ನಮ್ಮ ಪರವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
