ನಟ ದರ್ಶನ್ ಮನೆ ನಾಯಿ ಮಹಿಳೆಗೆ ಕಚ್ಚಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ಗೆ ನೋಟಿಸ್ ನೀಡಲು ಆರ್.ಆರ್.ನಗರ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಪೊಲೀಸರು ದರ್ಶನ್ ಅವರ ಮನೆಯಲ್ಲಿನ ವ್ಯಕ್ತಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಟ ದರ್ಶನ್ ಪ್ರಕರಣದ ಎರಡನೇ ಆರೋಪಿಯಾಗಿರುವ ಹಿನ್ನೆಲೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಿದ್ದಾರೆ.
