PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿಗಳು
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಕೊಡಗು > ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿಗಳು
ಕೊಡಗು

ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿಗಳು

ಪ್ರತಿನಿಧಿ
Last updated: July 31, 2024 6:51 pm
ಪ್ರತಿನಿಧಿ
Published July 31, 2024
Share
SHARE

ಜನಜೀವನ ಅಸ್ತವ್ಯಸ್ಥ । ಗ್ರಾಮೀಣ ರಸ್ತೆಗಳು ಸಂಪೂರ್ಣ ಜಲಾವೃತ । ಸಂಚಾರಕ್ಕೆ ಕಡಿತ । ಅಪಾಯದ ಭಯದಲಿ ಜನರು

ಪಾರ್ಥಚಿಣ್ಣಪ್ಪ ವಿರಾಜಪೇಟೆ

ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಕೊಡಗು ಜಿಲ್ಲೆ ತ್ತತರಿಸಿ ಹೋಗಿದೆ. ನದಿ, ಕಾಲುವೆ, ತೋಡು, ತೊರೆಗಳು ತುಂಬಿ ಹರಿಯುತ್ತಿದೆ.

ಮುಖ್ಯ ರಸ್ತೆಗಳು ಹೊರತು ಪಡಿಸಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಜಲಾವೃತ ಗೊಂಡಿದ್ದು, ಗ್ರಾಮಗಳ ಸಂಚಾರ ಕಡಿತಗೊಂಡಿದೆ. ನದಿ ಪಾತ್ರದ ಗದ್ದೆ, ತೋಟಗಳು ಜಲಾವೃತಗೊಂಡಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

- ಜಾಹೀರಾತು -

ಕಾವೇರಿ ನದಿಯಲ್ಲಿ ನಿರಿನ ಮಟ್ಟ ಏರುತ್ತಿದ್ದು, ಬೇತ್ರಿಯಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ವಿರಾಜಪೇಟೆ ತಾಲೂಕು ಬೇತ್ರಿಯಿಂದ ಮಡಿಕೇರಿ ತಾಲೂಕು ಪಾರಣೆಗೆ ತೆರಳುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಸಂಚರಕ್ಕೆ ಸಂಪರ್ಕ ಕಡಿದುಕೊಂಡಿದೆ.

ಬೇತ್ರಿಯ ಹೆಮ್ಮಾಡು ಗ್ರಾಮ ಸಂಪೂರ್ಣ ನೀರಿನಿಂದ ತುಂಬಿ ದ್ವೀಪದಂತಾಗಿದೆ. ಬೆಳ್ಳುಮಾಡು, ನಾಲ್ಕೇರಿ, ಮೈತಾಡಿ, ಅರಮೇರಿ ಕಡಂಗಮೂರುರು, ಕದನೂರು ಗ್ರಾಮಗಳ ಬಹುತೇಕ ಗದ್ದೆ ಹಾಗೂ ಕಾಫಿ ತೋಟಗಳು ಜಲಾವೃತಗೊಂಡಿದೆ. ಬೇತ್ರಿಯ ಹೊಳೆ ದಂಡೆಯಲ್ಲಿ ೬೫ಕ್ಕೂ ಹೆಚ್ಚು ಮನೆಗಳಿದ್ದು ೨೦೦ಕ್ಕೂ ಅಧಿಕ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ೬ ಮನೆಗಳಿಗೆ ನೀರು ನುಗ್ಗಿದೆ.

ತಾಲೂಕು ಆಡಳಿತ ತೀವೃ ನಿಗಾ ಇಟ್ಟಿದ್ದು, ಆ ಭಾಗದ ಜನರಿಗೆ ಉಪಯೋಗವಾಗುವಂತೆ ಕಾಳಜಿ ಕೇಂದ್ರವನ್ನು ಪ್ರಾರಂಭಿಸಿದೆ.
ಬುಧವಾರ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ ಪರಿಣಮಾ ನೀರಿನ ಮಟ್ಟ ನಿಧಾನವಾಗಿ ಇಳಿಮುಖ ಗೊಳ್ಳುತ್ತಿದೆ. ಕೆಲವು ಕಡೆಗಳಲ್ಲಿ ಸಣ್ಣ-ಪುಟ್ಟ ಬರೆಗಳು ಜರೆದಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಜಿಲ್ಲೆಯಲ್ಲಿ ಮಳೆಯ ಪ್ರಮಾಣ: ಮೇ ತಿಂಗಳಿಂದ ಜು.೩೧ರ ಬೆಳಗ್ಗೆ ೮ ಗಂಟೆಯವರೆಗೆ ವಿರಾಜಪೇಟೆ ತಾಲೂಕಿನಲ್ಲಿ ೪೦೦೩.೫೦ ಮಿಮೀ (೧೬೦.೧೪ಇಂಚು) ಮಳೆಯಾಗಿದೆ. ಮೇ ತಿಂಗಳಲ್ಲಿ ವಿರಾಜಪೇಟೆ ಹೋಬಳಿಯಲ್ಲಿ ೨೫೭.೫(೧೦.೩ಇಂಚು) ಮಿಮೀ, ಅಮ್ಮತ್ತಿಯಲ್ಲಿ ೨೪೪.೫ ಮಿಮೀ (೯.೭೮ಇಂಚು), ಜೂನ್ ತಿಂಗಳಲ್ಲಿ ವಿರಾಜಪೇಟೆ ಹೋಬಳಿಯಲ್ಲಿ ೫೪೮.೯ ಮಿಮೀ(೨೧.೯೫ ಇಂಚು), ಅಮ್ಮತ್ತಿಯಲ್ಲಿ ೪೭೪ ಮಿಮೀ(೧೮.೯೬ ಇಂಚು), ಜುಲೈ ತಿಂಗಳಲ್ಲಿ ವಿರಾಜಪೇಟೆ ಹೋಬಳಿಯಲ್ಲಿ ೧೩೧೨.೫ ಮಿಮೀ(೫೨.೫೦ಇಂಚು), ಅಮ್ಮತ್ತಿಯಲ್ಲಿ ೧೧೬೬.೧ ಮಿಮೀ(೪೬.೬೪ಇಂಚು) ಮಳೆ ಪ್ರಮಾಣ ದಾಖಲಾಗಿದೆ.

ವಿರಾಜಪೇಟೆ ಬೆಟ್ಟ ಪ್ರದೇಶಗಳಾದ ನೆಹರು ನಗರ, ಅಯ್ಯಪ್ಪ ಬೆಟ್ಟದಲ್ಲಿ ಅಪಾಯದ ಅಂಚಿನಲ್ಲಿರುವ ೬೬ ಕುಟುಂಬಗಳನ್ನು ಸ್ಥಳಾಂತರಿಸುವಂತೆ ಸೂಚಿಸಿದರು. ಪ್ರತಿ ಮಳೆಗಾಲ ಬಂತೆಂದರೆ ಸ್ಥಳಾಂತರದ ಕೂಗು ಮುನ್ನಲೆಗೆ ಬರುತ್ತದೆ. ನಂತರ ಮುಂದಿನ ಮಳೆಗಾಲದವರೆಗೆ ಯಾವುದೇ ತಂಟೆ ತಕರಾರು ಇರುವುದಿಲ್ಲ. ಪ್ರತಿ ಮಳೆಗಾಲದಲ್ಲಿ ಆ ಭಾಗದ ಜನರು ಸರ್ಕಾರದ ಕಾಳಜಿ ಕೇಂದ್ರಗಳಿಗೆ ತೆರಳಲು ಹಿಂದೇಟು ಹಾಕುತ್ತಾರೆ. ಈ ಬಾರಿಯು ಕೂಡ ಸ್ಥಳೀಯ ಪುರಸಭೆ ಅಧಿಕಾರಿಗಳು ಅಲ್ಲಿಗೆ ತೆರಳಿ ಅವರ ಮನ ವೋಲಿಸಲು ಪ್ರಯತ್ನಿಸಿದ್ದಾರೆ. ಕೆಲವರು ಕಾಳಜಿ ಕೇಂದ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಕೆಲವರು ಅಕ್ಕಪಕ್ಕದ ಸಂಬಂಧಿಕರ ಮನೆಗೆ ತೆರಳುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ ಎಂದು ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದ್ದಾರೆ.

ಜುಲೈ ಅಂತ್ಯದವರೆಗೆ ಮನೆ ಹಾನಿಯಲ್ಲಿ ೪೮ ಪ್ರಕರಣಗಳು ವರದಿಯಾಗಿವೆ. ೪೨ ಪ್ರಕರಣಗಳಲ್ಲಿ ಆರಂಭಿಕ ಹಂತದಲ್ಲಿ ಅನುದಾನ ಬಿಡುಗಡೆ ಗೊಳಿಸಲಾಗಿದೆ. ಕೆಲವು ತಾಂತ್ರಿಕ ತೊಂದರೆಗಳಿಂದ ೬ ಪ್ರಕರಣದಲ್ಲಿ ಅನುದಾನ ಬಿಡುಗಡೆ ಗೊಳಿಸಲು ವಿಳಂಬವಾಗಿದೆ. ಅಮ್ಮತ್ತಿ ಹೋಬಳಿಯ ಕರಡಿಗೋಡು ಮತ್ತು ಮಾಲ್ದಾರೆಯಲ್ಲಿ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಬಾಡಗ ಬಾಣಂಗಾಲದಲ್ಲಿ ಪಕೃತಿ ವಿಕೋಪದಲ್ಲಿ ಹಸು ಮೃತಪಟ್ಟಿದ್ದು ಪರಿಹಾರ ನೀಡಲು ಬಾಕಿ ಇದೆ.

ಕಾಳಜಿ ಕೇಂದ್ರದ ವಿವರ: ತಾಲೂಕಿಗೆ ಸಂಬಂಧಿಸಿದಂತೆ ಸಂತ ಅನ್ನಮ್ಮ ಶಾಲೆ ವಿರಾಜಪೇಟೆ, ಸರ್ಕಾರಿ ಪ್ರಾಥಮಿಕ ಶಾಲೆ ತೋರಾ, ಸ್ವರ್ಣಮಾಲ ಕಲ್ಯಾಣ ಮಂಟಪ ಸಿದ್ದಾಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಚ್ಚಿನಾಡು ಕಡೆಗಳಲ್ಲಿ ಕಾಳಜಿ ಕೇಂದ್ರವನ್ನು ಪ್ರಾರಂಭಿಸಿದ್ದಾರೆ. ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯಲ್ಲಿ ೧, ಸರ್ಕಾರಿ ಪ್ರಾಥಮಿಕ ಶಾಲೆ ತೋರಾದಲ್ಲಿ ೨೪, ಸ್ವರ್ಣಮಾಲ ಕಲ್ಯಾಣ ಮಂಟಪ ಸಿದ್ದಾಪುರದಲ್ಲಿ ೫೧, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಚ್ಚಿನಾಡುವಿನಲ್ಲಿ ೪೪ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಪ್ರಕೃತಿ ವಿಕೋಪವನ್ನು ಎದುರಿಸಲು ಎನ್‌ಡಿಆರ್‌ಎಫ್ ತಂಡ ಸಿದ್ದವಿದೆ.

೨೦೧೯ರಲ್ಲಿ ತೋರಾದಲ್ಲಿ ನಡೆದ ಗುಡ್ಡಕುಸಿತ ಸ್ಥಳದಲ್ಲಿ ಹಿರಿಯ ಗಣಿ ಮತ್ತು ಭೂ ವಿಜ್ಞಾನಿ ರಾಹುಲ್ ಅವರ ನೇತೃತ್ವದ ತಂಡ ಅಲ್ಲಿಯೆ ಎಲ್ಲವನ್ನು ಅವಲೋಕನ ಮಾಡುತ್ತಿದ್ದಾರೆ. ಉಳಿದ ಕಾಳಜಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ, ಅಡಿಗೆ, ಇನ್ನಿತರ ವ್ಯವಸ್ಥೆಗಳನ್ನು ಆಯಾಯ ಗ್ರಾಪಂ ವ್ಯಾಪ್ತಿಯ ಪಿಡಿಒಗಳು, ರೆವಿನ್ಯೂ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಸಾರ್ವಜನಿಕರಿಗೆ ಯಾವುದೇ ತೋಂದರೆ ಉಂಟಾದಲ್ಲಿ ನೇರವಾಗಿ ತಹಸೀಲ್ದಾರ್ ರಾಮಚಂದ್ರ ಅವರನ್ನು ಸಂಪರ್ಕಿಬಹುದಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.

ಪೊಟೊ ೩೧ ವಿಟಪಿ ೧ ಬೇತ್ರಿ-ಪಾರಣೆ ಸಂಫರ್ಕ ರಸ್ತೆ ಕಡಿತ ೨ ಬೇತ್ರಿ ಸೇತುವೆ. ೩ ಕದನೂರು ಬಳಿ ಗದ್ದೆ ಜಲಾವೃತ ಗೊಂಡಿರುವುದು.
************************

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಕೊಡಗು

ವಿಶೇಷ ಪ್ಯಾಕೇಜ್ ಘೋಷಿಸಲಿ

August 1, 2024
ಕೊಡಗು

ಜೆ.ಪಿ.ನಡ್ಡಾ ಬಂಧನಕ್ಕೆ ಒತ್ತಾಯ

March 24, 2024
ಕೊಡಗು

ಕುಂಡಂಡ ನಿಯಾಬ್ ಆಯ್ಕೆ

August 3, 2024
ಕೊಡಗು

ನಿರ್ಬಂಧವಿದ್ದರೂ ಭಾರಿ ತೂಕದ ವಾಹನಗಳ ಸಂಚಾರ

July 9, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?