PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಲಾಭದ ಹಾದಿಗೆ ಮರಳಿದ ನಮ್ಮ ಮೆಟ್ರೋ: 9 ತಿಂಗಳಲ್ಲಿ 450 ಕೋಟಿ ರೂ. ಆದಾಯ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಜಿಲ್ಲೆ > ಲಾಭದ ಹಾದಿಗೆ ಮರಳಿದ ನಮ್ಮ ಮೆಟ್ರೋ: 9 ತಿಂಗಳಲ್ಲಿ 450 ಕೋಟಿ ರೂ. ಆದಾಯ
ಜಿಲ್ಲೆ

ಲಾಭದ ಹಾದಿಗೆ ಮರಳಿದ ನಮ್ಮ ಮೆಟ್ರೋ: 9 ತಿಂಗಳಲ್ಲಿ 450 ಕೋಟಿ ರೂ. ಆದಾಯ

Prathinidhi News
Last updated: January 11, 2024 10:36 am
Prathinidhi News
Published January 11, 2024
Share
SHARE

ಬೆಂಗಳೂರು, ಜ 11: ನಷ್ಟದಲ್ಲಿ ಸಾಗುತ್ತಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ನಡುವೆ ನಮ್ಮ ಮೆಟ್ರೋ ಲಾಭದ ಹಳಿಗೆ ಮರಳಿದೆ. ಮೊದಲ ಬಾರಿಗೆ ನಷ್ಟದ ಹಾದಿಯಿಂದ ಲಾಭದ ಹಾದಿಗೆ ಬಂದಿರುವ ನಮ್ಮ ಮೆಟ್ರೋ, ಕಳೆದ 9 ತಿಂಗಳಿನಲ್ಲಿ ಬಿಎಂಆರ್​ಸಿಎಲ್​​ಗೆ ಬರೊಬ್ಬರಿ 450 ಕೋಟಿ ರೂ. ಆದಾಯ ಗಳಿಸಿಕೊಟ್ಟಿದೆ. ಮೆಟ್ರೋ ಜಾಲ ವಿಸ್ತರಣೆ, ನಿಲ್ದಾಣ ಹಾಗೂ ರೈಲಿನ ಒಳಗೆ ಜಾಹೀರಾತಿಗೆ ಅವಕಾಶ ನೀಡಿರುವುದು ಆದಾಯ ಏರಿಕೆಗೆ ನೆರವಾಗಿದೆ ಎನ್ನಲಾಗಿದೆ.

ನಮ್ಮ ಮೆಟ್ರೋ ಏಪ್ರಿಲ್​​​ನಿಂದ ಡಿಸೆಂಬರ್​​​ವರೆಗೆ ಜಾಹೀರಾತಿನ‌ ಮೂಲಕ ಬರೊಬ್ಬರಿ 50 ಕೋಟಿ‌ ರೂ. ಆದಾಯ ಗಳಿಸಿದೆ. ಮೆಟ್ರೋ ಜಾಲ ವಿಸ್ತರಣೆಯಿಂದ ಟಿಕೆಟ್ ಮೂಲಕ ಸಿಗುವ ಆದಾಯವೂ ಹೆಚ್ಚಾಗಿದೆ. ಕೇವಲ ಟಿಕೆಟ್ ಮಾರಾಟದಿಂದಲೇ ನಮ್ಮ ಮೆಟ್ರೋಗೆ 9 ತಿಂಗಳಿನಲ್ಲಿ 400 ಕೋಟಿ‌ ಆದಾಯ ದೊರೆತಿದೆ.

ಕಳೆದ ಮಾರ್ಚ್​​ನಲ್ಲಿ ಐಟಿ ಕಾರಿಡರ್​​ಗೆ‌ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಕೆ.ಆರ್. ಪುರದಿಂದ ವೈಟ್ ಫಿಲ್ಡ್ ಮಾರ್ಗಕ್ಕೆ ಚಾಲನೆ ನೀಡಲಾಗಿತ್ತು. ಪ್ರಯಾಣಿಕರ‌‌ ಸಂಖ್ಯೆ ಹೆಚ್ಚಳವಾದರೂ, ಬೈಯಪ್ಪನಹಳ್ಳಿಯಿಂದ ಕೆ.ಆರ್ ಪುರಕ್ಕೆ ಕನೆಕ್ಟಿವಿಟಿ ಇಲ್ಲದೆ ತೊಂದರೆ ಆಗುತ್ತಿತ್ತು. ಆದರೆ, ಅಕ್ಟೋಬರ್​​​ನಲ್ಲಿ ಬೈಯಪ್ಪನಹಳ್ಳಿಯಿಂದ ಕೆ.ಆರ್ ಪುರ ಮೆಟ್ರೋ ಮಾರ್ಗಕ್ಕೆ ಚಾಲನೆ ದೊರೆತಿದೆ. ನಂತರ ಐಟಿ ಕಾರಿಡಾರ್​​ನಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಳವಾಗಿದೆ.

ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ವರೆಗೆ 4 ತಿಂಗಳಿನಲ್ಲಿ ನಮ್ಮ ಮೆಟ್ರೋಗೆ ಬರೋಬ್ಬರಿ 8 ಕೋಟಿ ರೂಪಾಯಿ ನಷ್ಟವಾಗಿತ್ತು. ಆದರೆ, ಅಕ್ಟೋಬರ್ ಬಳಿಕ ಬಿಎಂಆರ್​​​​ಸಿಎಲ್ ನಷ್ಟದಿಂದ ಲಾಭಕ್ಕೆ ಮರಳಿದೆ. ಅಕ್ಟೋಬರ್​​ನಲ್ಲಿ 6.8 ಕೋಟಿ ರೂ., ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ತಲಾ 4 ಕೋಟಿ ರೂ. ಲಾಭ ಆಗಿದೆ.

- ಜಾಹೀರಾತು -

ಮೆಟ್ರೋ ಫಿಡರ್ ಬಸ್ ಹೆಚ್ಚಳ ಮಾಡಿದ್ದು ಕೂಡ ಪ್ರಯಾಣಿಕರ ಹೆಚ್ಚಳಕ್ಕೆ ಕಾರಣವಾಗಿದೆ. 2023ರ ಜನವರಿಯಲ್ಲಿ ಪ್ರತಿ ನಿತ್ಯ ಸುಮಾರು 5.32 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದ ಒಂದೇ ವರ್ಷದಲ್ಲಿ ಸುಮಾರು ಶೇಕಡಾ 30 ರಷ್ಟು ಏರಿಕೆಯಾಗಿದೆ. ಈಗ ಪ್ರತಿನಿತ್ಯ ಸರಾಸರಿ 6.88 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಜಿಲ್ಲೆ

ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಬೆಡ್​ನಲ್ಲಿ ಎರಡೆರಡು ಮಕ್ಕಳಿಗೆ ಚಿಕಿತ್ಸೆ

January 7, 2024
ಜಿಲ್ಲೆ

ಲಂಚ ಕೇಳಿದರೆ ಮುಲಾಜಿಲ್ಲದೆ ಕ್ರಮ: ಡಿ.ಕೆ.ಶಿವಕುಮಾರ್‌

January 6, 2024
ಜಿಲ್ಲೆ

ಚೀನಾ ಮಾಸ್ಟರ್ಸ್‌: ಫೈನಲ್‌ಗೆ ಸಾತ್ವಿಕ್‌-ಚಿರಾಗ್ ಜೋಡಿ ಲಗ್ಗೆ

November 26, 2023
ಜಿಲ್ಲೆ

ಮರಾಠಿ ಭಾಷಿಕರಿಗೆ ಪರಿಹಾರ ನಿಧಿ ಮಂಜೂರು, ಬೆಳಗಾವಿಯಲ್ಲೇ ಆರೋಗ್ಯ ವಿಮೆ ತೆರೆದ ಮಹಾರಾಷ್ಟ್ರ

January 9, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?